ವಿವೇಕಾನಂದ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಎಂ.ಕಾಂ ವಿಭಾಗದ ವತಿಯಿಂದ ಶುಕ್ರವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಕಾಂ ವಿಭಾಗದ ಮುಖ್ಯಸ್ಥೆ ವಿಜಯಸರಸ್ವತಿ ಗುರು ಎಂದರೆ ಅರಿವು,ಬೆಳಕು. ಕೇವಲ ನಾಲ್ಕು ಗೋಡೆಯ ಮಧ್ಯೆ ತರಗತಿ ಮಾಡುವವರು ಮಾತ್ರ ಗುರು ಅಲ್ಲ. ಜೀವನದ ಮಾರ್ಗದರ್ಶನ ನೀಡುವ ಪ್ರತಿಯೋರ್ವನೂ ಗುರು. ಶಿಕ್ಷಕರ ದಿನಾಚರಣೆ ಕೇವಲ ಪ್ರಾಥಮಿಕ, ಪ್ರೌಢಶಾಲೆಯ ಹಂತಕ್ಕೆ ಮಾತ್ರ ಸೀಮಿತವಾಗದೆ ಸ್ನಾತಕೋತ್ತರ ವಿದ್ಯಾರ್ಥಿಗಳೂ ಗುರುವಂದನೆ ಆಯೋಜಿಸಿರುವುದು ವಿದ್ಯಾರ್ಥಿಗಳ ಸುಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎಂದರು. ಪ್ರಥಮ ಮತ್ತು ದ್ವಿತೀಯ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ದ್ವಿತೀಯ ಎಂ.ಕಾಂ ವಿದ್ಯಾರ್ಥಿ ಕೃಷ್ಣರಾಜ್ ಜೋಯಿಸ ಅತಿಥಿಗಳನ್ನು ಸ್ವಾಗತಿಸಿದರು. ವಿವೇಕಾನಂದ ಕಾಲೇಜಿನ ಪದವಿ ವಿಭಾಗದ ಉಪನ್ಯಾಸಕಿ ರವಿಕಲಾ ಹಾಗೂ ಎಂ.ಕಾಂ ವಿಭಾಗದ ಉಪನ್ಯಾಸಕರಾದ ಸಂಧ್ಯಾ, ಅನನ್ಯಾ ಮತ್ತು ಹರಿಪ್ರಸಾದ್.ಎಸ್ ಉಪಸ್ಥಿತರಿದ್ದರು. ದ್ವಿತೀಯ ಎಂ.ಕಾಂ ವಿಭಾಗದ ವಿದ್ಯಾರ್ಥಿನಿ ನಯನಾ ಎಂ.ವಿ ವಂದಿಸಿದರು. ಶ್ರುತಿ ವಾಸುದೇವ ಕೆ ಮತ್ತು ಸಂಧ್ಯಾ .ಕೆ ಕಾರ್ಯಕ್ರಮ ನಿರ್ವಹಿಸಿದರು.