ತುಳು ಸಂಸ್ಕೃತಿ ಉಳಿಸಬೇಕು: ಪ್ರೊ.ವೇದವ್ಯಾಸ
ಪುತ್ತೂರು: ತುಳುನಾಡಿನ ಪದ್ಧತಿಯ ಹಿಂದೆ ವಿಜ್ಞಾನದ ವಿಚಾರಧಾರೆಯೊಂದಿಗೆ ಧಾರ್ಮಿಕ ವಿಚಾರಗಳೂ ಅಡಕವಾಗಿದೆ. ಇಂತಹ ತುಳು ಸಂಸ್ಕೃತಿ, ಪದ್ಧತಿಗಳನ್ನು ಉಳಿಸಬೇಕಾಗಿದೆ. ತುಳುನಾಡು ಆಧುನಿಕತೆಯತ್ತ ವಾಲುತಿರುವುದರಿಂದಾಗಿ ತುಳು ಪರಂಪರೆಗೆ ಸೇರಿದ ಹಲವಾರು ವಸ್ತುಗಳು ಮಾಯವಾಗುತ್ತಿದ್ದು ಅವುಗಳ ರಕ್ಷಣೆ ಅತೀ ಅಗತ್ಯ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ| ವೇದವ್ಯಾಸ ರಾಮಕುಂಜ ಹೇಳಿದರು.
ಅವರು ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ನಡೆದ ಆಟಿದ ಐತಾರ ಕಜ್ಜ ಎಂಬ ಕಾರ್ಯಕ್ರಮದಲ್ಲಿ ದೈವಾರಾಧನೆ ಬಗೆಗೆ ನಡೆದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಅಜಿತ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.