ತುಳುಲಿಪಿ ಕಲಿಕೆ ಅತೀ ಅಗತ್ಯ : ದುರ್ಗಾಪ್ರಸಾದ್ ರೈ
ಪುತ್ತೂರು: ಇಂದಿನ ಕಾಲದಲ್ಲಿ ತುಳು ಲಿಪಿ ಕಲಿಕೆ ಅತೀ ಅಗತ್ಯ. ಅದರ ಮಹತ್ವವನ್ನು ತಿಳಿದುಕೊಂದು ಅದನ್ನು ಉಳಿಸಿ ಬೆಳೆಸಬೇಕು. ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ತುಳುಸಂಘ, ಹೆರಿಟೇಜ್ ಕ್ಲಬ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ’ತುಳು ಲಿಪಿ ಕಲಿಕಾ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಮಾತನಾಡಿ ತುಳು ಲಿಪಿ ಮಲೆಯಾಳಂಗಿಂತಲೂ ಪ್ರಾಚೀನ ಲಿಪಿ. ಅದು ಧಾರ್ಮಿಕ ಗ್ರಂಥಗಳ ರಚನೆಗೂ ಉಪಯೋಗಿಸಲ್ಪಡುತ್ತಿತ್ತು. ಇದು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಪ್ರಸ್ತುತ ವಿದ್ಯಾಸಂಸ್ಥೆಗಳಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಕಲಿಯಲು ಅವಕಾಶವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಈಗಿನ ಕಾಲದಲ್ಲಿ ತುಳು ಲಿಪಿಯನ್ನು ಬಳಸಿ ಬೆಳೆಸಬೇಕಾದ ಅವಶ್ಯಕತೆ ಇದೆ. ತುಳು ಸಾಹಿತ್ಯ ತುಳುನಾಡ ಚರಿತ್ರೆಯ ಪುನರ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು
ತುಳು ಲಿಪಿ ಕಲಿಕಾಕಾರ ವಿಶ್ರಾಂತ ಕಂದಾಯ ಅಧಿಕಾರಿ ತಮ್ಮಯ್ಯ, ವಿಶ್ರಾಂತ ಗೆಜೆಟ್ ಅಧಿಕಾರಿ ದಿನಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾಯಿಕೃತಿ ಪ್ರಾಥಿಸಿದರು. ತುಳು ಸಂಘದ ಸಂಚಾಲಕ ಪ್ರೊ. ನರಸಿಂಹ ಭಟ್ ಸ್ವಾಗತಿಸಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್ ನಾಯಕ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸ್ವಾತಿ ವಂದಿಸಿದರು. ವಿದ್ಯಾರ್ಥಿ ನಿತಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.