ವಿವೇಕಾನಂದದಲ್ಲಿ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಆಯೋಜಿಸಲ್ಪಡುತ್ತಿರುವ ಸರಣಿ ಕಾರ್ಯಕ್ರಮದ ಎರಡನೇ ಉಪನ್ಯಾಸ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಪ್ರೊ.ಸದಾಶಿವ ರಾವ್ ಹಾಗೂ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀಧರ ಕಾಮತ್ ನೂತನ ಸೇವಾ ತೆರಿಗೆ ವಿಷಯವಾಗಿ ಉಪನ್ಯಾಸ ನೀಡಿದರು.
ಉಪನ್ಯಾಸವು ತೆರಗೆಗೆ ಒಳಪಡುವ ಹಾಗು ಒಳಪಡದ ಸೇವೆಗಳು ಮಾತ್ರವಲ್ಲದೆ ತೆರಿಗೆಯ ನಿಯಮಗಳ ಬಗೆಗೆ ಮಾಹಿತಿಯನ್ನು ಒಳಗೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಹಿಸಿದ್ದರು.
ಉಪನ್ಯಾಸಕಿಯರಾದ ರವಿಕಲಾ ಸ್ವಾಗತಿಸಿ, ರೇಖಾ ಪಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಅನ್ನಪೂರ್ಣ ವಂದಿಸಿದರು. ಉಪನ್ಯಾಸಕಿಯರಾದ ಚೈತ್ರಾ ಮತ್ತು ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು