VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿದ್ಯಾಕ್ಷೇತ್ರದಲ್ಲಿ ವಿವೇಕಾನಂದದಿಂದ ಅದ್ಭುತ ಹೆಜ್ಜೆ: ಸದಾನಂದ ಗೌಡ – ವಿವೇಕಾನಂದ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಮಿತಿ ಪಟ್ಟಿ ಬಿಡುಗಡೆ

ಪುತ್ತೂರು: ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರದ ಕೊಡುಗೆ ಅಪಾರ. ಆದ್ದರಿಂದಲೇ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಜಾಗತಿಕ ಸವಾಲುಗಳಿಗೆ ಎದೆಯೊಡ್ಡಿ ಬೆಳೆಯುವ ವ್ಯಕ್ತಿತ್ವವನ್ನು ನಮ್ಮ ಯುವ ಪೀಳಿಗೆಯಲ್ಲಿ ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

            ಅವರು ಶನಿವಾರ ವಿವೇಕಾನಂದ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು.

News Photo DVS 1

            ದೇಶದ ಪ್ರಧಾನಿ ನರೇಂದ್ರ ಮೋದಿ ಸದಾ ಕೌಶಲ್ಯವೃದ್ಧಿಯ ಬಗೆಗೆ ಮಾತನಾಡುತ್ತಾರೆ ಮಾತ್ರವಲ್ಲದೆ ಆ ಹಿನ್ನಲೆಯಲ್ಲಿ ಪ್ರಯತ್ನಿಸುತ್ತಲೇ ಇರುತ್ತಾರೆ. ನಮ್ಮ ದೇಶದಲ್ಲಿ ಯುವ ಜನಾಂಗದ ಸಂಖ್ಯೆ ಹೆಚ್ಚಿರುವುದು ನಮ್ಮ ಸಾಧನೆಗೆ ಪೂರಕವಾಗುವಂತಿದೆ ಎಂದರಲ್ಲದೆ ವಿದ್ಯಾಕ್ಷೇತ್ರದಲ್ಲಿ ವಿವೇಕಾನಂದ ಕಾಲೇಜು ಅದ್ಭುತ ಹೆಜ್ಜೆಗಳನ್ನಿಟ್ಟಿದೆ. ಸುವರ್ಣ ಮಹೋತ್ಸವ ಅನ್ನುವುದು ಸಂಸ್ಥೆಯೊಂದಕ್ಕೆ ತಾನು ಮುಂದುವರಿಯುತ್ತಿರುವ ಕ್ಷೇತ್ರದಲ್ಲಿ ಮತ್ತೂ ಸದೃಢ ಹೆಜ್ಜೆಗಳನ್ನಿಡಲು ಅನುಕೂಲ ಮಾಡಿಕೊಡುತ್ತದೆ ಎಂದು ನುಡಿದರು.

            ವಿವೇಕಾನಂದ ಕಾಲೇಜು ಒಂದು ಶಕ್ತಿಕೇಂದ್ರ. ಇಲ್ಲಿಗೆ ಅಡಿಯಿಟ್ಟರೆ ಹೊಸ ಚೈತನ್ಯ ಮೂಡುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಇಂದಿನ ಭೇಟಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

            ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಬಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ.ರಾಮ ಭಟ್ ಉರಿಮಜಲು ಮಾತನಾಡಿ ಸರಿಯಾದ ನಾಯಕತ್ವ ದೊರಕಿದರೆ ಖಂಡಿತವಾಗಿಯೂ ಈ ದೇಶ ಜಗದ್ವಂದ್ಯವಾಗಲಿದೆ. ಮೋದಿ ಪ್ರಧಾನಿಯಾದ ನಂತರ ಈ ಭರವಸೆ ಮತ್ತಷ್ಟು ಪ್ರಬಲವಾಗಿದೆ. ಮೋದಿಯವರ ತಂಡದಲ್ಲಿ ಡಿ.ವಿ.ಸದಾನಂದ ಗೌಡರಂತಹವರಿರುವುದು ದೇಶದ ಅಭಿವೃದ್ಧಿಗೆ ಪೂರಕವೆನಿಸಿದೆ ಎಂದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ, ಕಾಲೇಜು ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಉಪಸ್ಥಿತರಿದ್ದರು.

            ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಸುವರ್ಣ ಮಹೋತ್ಸವ ಸಮಿತಿಯ ಪಟ್ಟಿಯನ್ನು ಫೋಷಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ವಿ.ನಾರಾಯಣ ವಂದಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.