VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನಲ್ಲಿ ಮತದಾರರ ನೋಂದಣಿ ಅಭಿಯಾನ

ಪುತ್ತೂರು ಡಿ.22: ಮತದಾನವು ಪ್ರತಿಯೊಬ್ಬ ಪ್ರಜೆಯ ಅತಿದೊಡ್ಡ ಹಕ್ಕು. ಸರ್ಕಾರವು ಜನರಿಂದ ಜನರಿಗಾಗಿ ಜನರಿಗೋಸ್ಕರ ನಿರ್ಮಾಣವಾಗಿದೆ. ನಮ್ಮ ದೇಶವು ಸಮರ್ಥ ಹಾಗೂ ಕ್ರಮಬದ್ಧವಾದ ಸರಕಾರವನ್ನು ಹೊಂದಿದೆ.ಆದರೆ ಈ ಕಾಲಘಟ್ಟದಲ್ಲಿ ವಿದ್ಯಾವಂತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ, ಇದು ವಿಪರ್ಯಾಸವೇ ಸರಿ. ಮತದಾನ ಕಾರ್ಯದಲ್ಲಿ ತೊಡಗದವರು ದೇಶದ ಸಂವಿಧಾನಕ್ಕೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದು ಪುತ್ತೂರಿನ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ ಹೇಳಿದರು.

ಅವರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಚುನಾವಣಾ ಸಾಕ್ಷರತಾ ಸಂಘ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಮತದಾನ ನಮ್ಮ ದೇಶದ ಪ್ರಬಲವಾದ ಅಸ್ತ್ರ. ಪ್ರತಿಯೊಂದು ಪ್ರಜೆಯ ಮತವು ಅತಿ ಅಮೂಲ್ಯ ಎಂದು ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ಮೂರು ಹಂತದ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್ ಭಾಗವಹಿಸಿ ಮತದಾರರ ನೋಂದಣಿ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಕೆಎಎಸ್ ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ ಶ್ರೀಧರ ನಾಯ್ಕ್ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಡಾ.ವಿಷ್ಣು ಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕಿ ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನಲ್ಲಿ ಮೂರನೇ ಹಂತಗಳಲ್ಲಿ ಮತದಾರರ ನೋಂದಣಿ ಕಾರ್ಯಕ್ರಮವು ನಡೆಯಿತು. ದಿನಾಂಕ 16 ಡಿಸೆಂಬರ್ 2021 ರಂದು ಮೊದಲ ಹಂತ. ದಿನಾಂಕ 18 ಡಿಸೆಂಬರ್ 2021 ರಂದು ಎರಡನೇ ಹಂತ. ಹಾಗೂ ದಿನಾಂಕ 22 ಡಿಸೆಂಬರ್ 2021 ರಂದು ಮೂರನೇ ಹಂತದ ಮತದಾನ ನೋಂದಣಿ ಕಾರ್ಯಕ್ರಮವು ನಡೆಯಿತು. ಸುಮಾರು 489 ವಿದ್ಯಾರ್ಥಿಗಳು ವೋಟರ್ ಹೆಲ್ಪ್ ಲೈನ್ ಮೂಲಕ ಮತದಾರರ ಪಟ್ಟಿಗೆ ನೊಂದಣೆ ಮಾಡಲು ಅರ್ಜಿಯನ್ನು ಸಲ್ಲಿಸಿದರು.