ಆಧುನಿಕ ತಂತ್ರಜ್ಞಾನವನ್ನು ಮಹಿಳೆಯರು ಬಳಸುವಾಗ ಎಚ್ಚರ ಅಗತ್ಯ : ಅನ್ನಪೂರ್ಣ ಶರ್ಮ
ಪುತ್ತೂರು : ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆಧ್ಯಾತ್ಮಿಕವಾಗಿ ಸ್ತ್ರೀಯರು ಸಶಕ್ತರಾಗಬೇಕು. ಮಹಿಳೆಯರು ಆಧುನಿಕ ತಂತ್ರಜ್ಞಾನಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕು. ಮೊಬೈಲ್‌ನಿಂದ ಸಮಾಜದಲ್ಲಿ ಒಳಿತು-ಕೆಡುಕು ಎರಡೂ ಇದೆ. ತನ್ನ ಒಳಿತು ಯಾವುದರಲ್ಲಿ ಅಡಗಿದೆ ಎಂಬ ವಿವೇಕ ಮಹಿಳೆಯರಲ್ಲಿ ಇರಬೇಕು ಎಂದು ಪುತ್ತೂರಿನ ಶರ್ಮಾಸ್ ಕಮೀಷನ್‌ನ ನಿರ್ದೇಶಕಿ ಅನ್ನಪೂರ್ಣ ಶರ್ಮ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಮಹಿಳಾ ಘಟಕವು ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಸ್ತ್ರೀಯರ ರಕ್ಷಣೆಯ ಕಾನೂನಿನ ಅರಿವು ಎಂಬ ವಿಷಯದ ಬಗ್ಗೆ ಬುಧವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಮೋತಿ ಬಾ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಘಟಕದ ಸಂಯೋಜಕರಾದ ಹರಿಣಿ ಪುತ್ತೂರಾಯ, ಡಾ. ಆಶಾ ಸಾವಿತ್ರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.