ಯುವಜನತೆಯಿಂದ ಭಾಷೆಯ ಅಭಿವೃದಿ ಸಾಧ್ಯ : ಸದಾನಂದ ಪೆರ್ಲ
ಪುತ್ತೂರು : ಭಾಷಣಕ್ಕಿಂತ ಹಾಡು ಪರಿಣಾಮಕಾರಿಯಾಗಿದೆ. ಭಾಷಣಕ್ಕೆ ಎಲ್ಲರನ್ನೂ ತನ್ನೆಡೆಗೆ ಸೆಳೆಯಲು ಕಷ್ಟಸಾಧ್ಯ. ಆದರೆ ಸಂಗೀತಕ್ಕೆ ಆ ಶಕ್ತಿ ಇದೆ. ಜನಪದರಲ್ಲಿ ಮಾತಿಗಿಂತಲೂ ಮುಖ್ಯವಾಗಿ ಹಾಡಿನ ಮೂಲಕ ಮಾತುಗಳ ವಿನಿಮಯವಾಗುತ್ತಿತ್ತು. ತುಳು ಒಂದು ಭಾವೈಕ್ಯ ಭಾಷೆ. ತುಳುವಿನ ಮಹತ್ವ ಅರಿಯಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಹೇಳಿದರು.
ಅವರು ಇತ್ತಿಚೆಗೆ ವಿವೇಕಾನಂದ ಕಾಲೇಜಿನ ತುಳು ಸಂಘ, ಮಾನವಿಕ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಆಕಾಶವಾಣಿ ಹಾಗೂ ಪುತ್ತೂರಿನ ಸ್ವರ ಮಾಧುರ್ಯ ಕಲಾ ಮತ್ತು ಸೇವಾ ಟ್ರಸ್ಟ್ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತೆರಿಲೆ ತುಳುನಾಡ್ದ ಪೊರ್ಲು” ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ ನಾರಾಯಣ ಮಾತಾನಾಡಿ ತುಳುಭಾಷೆಯು ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿ