ದೇಶಕ್ಕೀಗ ಸಮರ್ಥ ನಾಯಕತ್ವ ದೊರಕಿದ ಸಂತೃಪ್ತಿ ಇದೆ : ಡಾ. ಕೃಷ್ಣ ಭಟ್ – ನೆಹರುನಗರದ ವಿವೇಕಾನಂದ ಕ್ಯಾಂಪಸ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಪುತ್ತೂರು: ದೇಶವಾಸಿಗಳ ಬಹುದಿನಗಳ ಕನಸಾಗಿದ್ದ ೩೭೦ನೇ ವಿಧಿಯ ರದ್ಧತಿ ಹಾಗೂ ಶ್ರೀ ರಾಮ ಮಂದಿರ ನಿರ್ಮಾಣಗಳು ರಾಷ್ಟ್ರಕ್ಕೆ ದೊರಕಿದ ಸಮರ್ಥ ನಾಯಕತ್ವದಿಂದಾಗಿ ಸಾಧ್ಯವಾಗಿದೆ. ಮಾತ್ರವಲ್ಲದೆ ದೇಶವೊಂದಕ್ಕೆ ಯೋಗ್ಯ ನಾಯಕತ್ವ ದೊರಕಿದಾಗ ಆ ದೇಶ ಹೇಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ ಎಂಬುದಕ್ಕೆ ಭಾರತ ಪ್ರಪಂಚಕ್ಕೇ ಉದಾಹರಣೆಯಾಗಿ ನಿಂತಿದೆ. ಕೋರೋನಾದಂತಹ ಪ್ರತಿಕೂಲ ಸನ್ನಿವೇಶದಲ್ಲೂ ಈ ದೇಶ ದೃತಿಗೆಡದೆ ಮಾದರಿಯಾಗಿ ನಿಂತದ್ದು ನಮಗೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಹೇಳಿದರು.
ಅವರು ಇಲ್ಲಿನ ನೆಹರು ನಗರದ ವಿವೇಕಾನಂದ ಕ್ಯಾಂಪಸ್ ನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣಗೈದು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಂದಿ ಭಾರತೀಯರು ತಮ್ಮ ಜೀವ ಜೀವನವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಹೋಲಿಸಿದರೆ ನಾವಿಂದು ಕೋರೋನಾದಿಂದಾಗಿ ಅನುಭವಿಸುತ್ತಿರುವ ಸ್ಥಿತಿ ಅಷ್ಟು ಗಂಭೀರವಾದದ್ದಲ್ಲ ಎಂದು ತೃಪ್ತಿಪಡಬೇಕಿದೆ. ಇಂತಹ ಸವಾಲಿನ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದದ್ದು. ನಾಳಿನ ನಾಗರಿಕರಿಗೆ ಧೈರ್ಯ ಸ್ಥೈರ್ಯಗಳನ್ನು ತುಂಬಿ ಸಮಾಜಕ್ಕೆ ಕೊಡಬೇಕಾದ ಗುರುತರ ಹೊಣೆ ಶಿಕ್ಷಕರ ಪಾಲಿಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿದೇಶಕ್ರಾದ ಇ ಶಿವಪ್ರಸಾದ್, ಜಯಂತಿ ನಾಯಕ್, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಮುರಳಿಕೃಷ್ಣ ಕೆ, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್, ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ, ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಜಿ.ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ.ಮಹೇಶ್ ಪ್ರಸನ್ನ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ್, ವಿವೇಕಾನಂದ ಹಾಸ್ಟೆಲ್ಸ್‌ನ ಅಧ್ಯಕ್ಷ ಅಚ್ಯುತ ನಾಯಕ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಕೃಷ್ಣ ಕಾರಂತ್, ಎನ್ ಸಿ ಸಿ ಘಟಕದ ನಿರ್ದೇಶಕ ಲೆಪ್ಟಿನೆಂಟ್ ಅತುಲ್ ಶೆಣೈ, ವಿವಿಧ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರುಗಳು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉದ್ಯೋಗಿಗಳು, ವಿವಿಧ ವಿವೇಕಾನಂದ ವಿದ್ಯಾಸಂಸ್ಥೆಗಳ ಉದ್ಯೋಗಿಗಳು ಎನ್‌ಸಿಸಿ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಝಂಡಾ ಊಂಚಾ ರಹೇ ಹಮಾರ ಹಾಗೂ ಜನಗಣ ಮನ ಗೀತೆಗಳನ್ನು ಹಾಡಲಾಯಿತು. ಸಾಮಾಜಿಕ ಅಂತರದೊಂದಿಗೆ ಕಾರ್ಯಕ್ರಮ ನಡೆಸಲಾಯಿತು. ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.