
ಪುತ್ತೂರು: ಅ.೯ ‘ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆಯನ್ನು ಹೆಚ್ಚಿಸಲು
ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮ ವಿದ್ಯಾಭ್ಯಾಸ
ಪೂರ್ಣಗೊಳಿಸಿದ ಬಳಿಕ ಉದ್ಯೋಗ ಅರಸಿ ಬೇರೆ ಬೇರೆ ಕ್ಷೇತ್ರಗಳಿಗೆ
ಹೋಗುವವರಿದ್ದೇವೆ. ಆ ಸಂದರ್ಭದಲ್ಲಿ ನಮಗೆ ದೃಢ ಮನಸ್ಸು ಹಾಗೂ
ಪ್ರೋತ್ಸಾಹ ನೀಡುವವರು, ಬೆಂಬಲಿಸುವವರು ಇರಬೇಕೆಂದು
ಬಯಸುತ್ತೇವೆ. ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಅದಕ್ಕೆ
ತಕ್ಕುದಾದ ಯಶಸ್ಸು ದೊರೆಯುತ್ತದೆ. ನಮ್ಮಿಂದ ಯಾವುದೂ
ಅಸಾಧ್ಯವಲ್ಲ. ಸಾಧಿಸುವ ಮನಸ್ಸಿದ್ದರೆ ಎಲ್ಲವನ್ನೂ ಸಾಧಿಸಬಹುದು’ ಎಂದು
ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾAತ್ ಗೋರೆ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಇಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ನಡೆದ ಕೌಶಲ್ಯ ವರ್ಧನೆ
ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸ್ನಾತಕೋತ್ತರ
ವಿಭಾಗ ನಿರ್ದೇಶಕ ಡಾ. ಶ್ರೀಧರ ಹೆಚ್. ಜಿ. ಮಾತನಾಡುತ್ತ, ‘ನಮ್ಮಲ್ಲಿ
ಮುಖ್ಯವಾಗಿ ಏಕಾಗ್ರತೆ ಇರಬೇಕು. ನಮ್ಮಿಂದ ಅಸಾಧ್ಯವಾದದ್ದು
ಯಾವುದೂ ಇಲ್ಲ. ನಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥ ರೀತಿಯಲ್ಲಿ
ಉಪಯೋಗಿಸಿಕೊಳ್ಳಬೇಕು. ಸಾಧನೆ ಮಾಡಿದ ಎಲ್ಲಾ ಸಾಧಕರು ಕಠಿಣ
ಪರಿಶ್ರಮದಿಂದಲೇ ಸಾಧಿಸಿದವರಗಿದ್ದಾರೆ’ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.
ವಿಜಯಸರಸ್ವತಿ, ದ್ವಿತೀಯ ಎಂ.ಕಾA ವಿಭಾಗದ ವಿದ್ಯಾರ್ಥಿ ನವೀನ್ ಕೃಷ್ಣ
ಉಪಸ್ಥಿತರಿದ್ದರು.
ಅಂತಿಮ ಎಂ.ಕಾA. ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು. ಅಂತಿಮ ಎಂ.ಕಾA. ವಿದ್ಯಾರ್ಥಿನಿ
ರಕ್ಷಿತ ಸ್ವಾಗತಿಸಿ, ಯಶ್ಮಿತÀ ವಂದಿಸಿದರು. ಕಾರ್ಯಕ್ರಮದಲ್ಲಿ
ಸ್ನಾತಕೋತ್ತರ ವಾಣಿಜ್ಯ ವಿಭಾಗದÀ ಪ್ರಾಧ್ಯಾಪಕರು, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.
