
ಪುತ್ತೂರು, ನ.20: ಪ್ರಸ್ತುತ ಕಾಲಘಟ್ಟದಲ್ಲಿ ಐಕ್ಯತಾ
ದಿನ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.
ನಮ್ಮೊಳಗಿನ ಬೇಧ-ಭಾವ ಕಡಿಮೆಗೊಳಿಸಿ ಒಗ್ಗಟ್ಟು
ಬೆಳೆಯಬೇಕು. ಬಡತನ, ಅಸಹಿಷ್ಣುತೆ,
ತಾರತಮ್ಯದಂತಹ ಸಮಸ್ಯೆಗಳು ಸಮಾಜದ ಒಳಿತಿಗೆ
ಬಹುದೊಡ್ಡ ಸವಾಲಾಗಿದೆ. ಭಾರತದ ಭವಿಷ್ಯ ವಿದ್ಯಾರ್ಥಿಗಳ
ಕೈಯಲ್ಲಿದ್ದು, ರಾಷ್ಟ್ರೀಯತೆಯ ಭಾವನೆಯನ್ನು
ಮೈಗೂಡಿಸಿಕೊಂಡು ಭಾರತದ ಸಾರ್ವಭೌಮತೆಯನ್ನು
ಎತ್ತಿ ಹಿಡಿದು, ರಾಷ್ಟ್ರೀಯ ಸಪ್ತಾಹವನ್ನು ಅರ್ಥಪೂರ್ಣವಾಗಿ
ಆಚರಿಸಬೇಕು ಎಂದು ಭೌತಶಾಸ್ತç ವಿಭಾಗದ ಮುಖ್ಯಸ್ಥ
ಹಾಗೂ ಅಧ್ಯಾಪಕ ಕ್ಷೇಮಾಭಿವೃದ್ಧಿ ವಿಭಾಗದ ವಿಶೇಷ
ಅಧಿಕಾರಿ ಡಾ. ಶಿವಪ್ರಸಾದ್ ಕೆ. ಎಸ್ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿ
ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಮತ್ತು ವಿವೇಕಾನಂದ ಸಂಶೋಧನಾ ಕೇಂದ್ರದ
ವತಿಯಿoದ ನಡೆದ ರಾಷ್ಟ್ರೀಯಐಕ್ಯತಾ ಸಪ್ತಾಹ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ
ಡೀನ್ ಡಾ. ವಿಜಯ ಸರಸ್ವತಿ ಪ್ರಾಸ್ತಾವಿಕ
ಮಾತುಗಳನ್ನಾಡುತ್ತಾ, ವಿದ್ಯಾರ್ಥಿಗಳು ಪ್ರೀತಿ, ವಿಶ್ವಾಸ
ಮತ್ತು ಸಹೋದರತ್ವದ ಮನೋಭಾವವನ್ನು
ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಸಾಮರಸ್ಯಕ್ಕಾಗಿ
ರಾಷ್ಟ್ರೀಯ ಐಕ್ಯತೆ ಮತ್ತು ಭಾವೈಕ್ಯತೆಯನ್ನು
ಬಲಪಡಿಸುವ ಸಲುವಾಗಿ ಐಕ್ಯತಾ ಸಪ್ತಾಹ ಆಚರಿಸಲಾಗುತ್ತದೆ.
ಭಾರತೀಯರಿಗೆ ಬೇಕಾಗಿರುವುದು ಸಹಿಷ್ಣುತೆ ಮತ್ತು
ಐಕ್ಯತಾ ಮನೋಭಾವ. ನಾವೆÀಲ್ಲರೂ ಭ್ರಾತೃತ್ವದ
ಭಾವನೆಯನ್ನು ಜಾಗೃತಗೊಳಿಸಿ ಸೌಹಾರ್ದತೆಯಿಂದ
ಬಾಳೋಣ ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಐಕ್ಯತಾ
ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ನಾತಕೋತ್ತರ
ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು. ಸ್ನಾತಕೋತ್ತರ ಅಧ್ಯಯನ
ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಅಂತಿಮ
ಎAಕಾA ವಿದ್ಯಾರ್ಥಿ ನವೀನ್ಕೃಷ್ಣ ವಂದಿಸಿ, ನಿರೂಪಿಸಿದರು.
