
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ
(ಸ್ವಾಯತ್ತ) ಕಾಲೇಜಿನಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 595
ಅಂಕ ಪಡೆದು ರಾಜ್ಯಕ್ಕೆ ಐದನೇಯ ಸ್ಥಾನ ಗಳಿಸಿದ ಕಾಣಿಯೂರು
ಸರಕಾರಿ ಪದವಿ ಪೂರ್ವ ಕಾಲೇಜಿನ ಶ್ರೀವಿದ್ಯಾ ಇವರನ್ನು ಅಭಿನಂದಿಸಿ
ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ
ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ
ಕೆ.ಎನ್ ಮಾತನಾಡಿ ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ
ಭಟ್, ವಿದ್ಯಾರ್ಥಿನಿಯ ಹೆತ್ತವರು ಹಾಗೂ ಉಪನ್ಯಾಸಕ ವೃಂದದವರು
ಉಪಸ್ಥಿತರಿದ್ದರು.
