News & Updates

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಶಿಕ್ಷಕ ರಕ್ಷಕಸಂಘದ ಸಭೆ

ಸವಾಲನ್ನು ಸ್ವೀಕರಿಸಲು ಕಲಿಸುವ ಶಿಕ್ಷಣ ನಮಗೆ
ದೊರಕಬೇಕು: ಮುರಳಿ ಕೃಷ್ಣ ಕೆ.ಎನ್

ಪುತ್ತೂರು, ಎ.24: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಂಕವನ್ನು
ಗಳಿಸುವುದು ಮಾತ್ರವಲ್ಲದೇ, ಜೀವನದಲ್ಲಿ ಒಳ್ಳೆಯ
ಮೌಲ್ಯಗಳನ್ನು ಕಲಿತು ಪರಿಪೂರ್ಣರಾಗಿ ಇಲ್ಲಿಂದ ತೆರಳಬೇಕು
ಎಂಬುವುದು ವಿವೇಕಾನಂದ ಕಾಲೇಜಿನ ಮುಖ್ಯ ಉದ್ದೇಶವಾಗಿದೆ. ಈಗಿನ
ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರವನ್ನು ಕಲಿಯುವುದು ತುಂಬಾ
ಮುಖ್ಯ. ಅದನ್ನು ನಾವು ವಿದ್ಯಾರ್ಥಿಗಳಿಗೆ ನಿರಂತರವಾಗಿ
ನೀಡುತ್ತಿದ್ದೇವೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ
ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್
ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಶಿಕ್ಷಕ ರಕ್ಷಕ
ಸಂಘ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ
ವಿದ್ಯಾರ್ಥಿಗಳ ಹೆತ್ತವರ ಸಭೆಯಲ್ಲಿ ಅಧ್ಯಕ್ಷೀಯ
ಮಾತುಗಳನ್ನಾಡಿದರು.
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಧೈರ್ಯವನ್ನು ತುಂಬುವ
ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು.
ಬದುಕಿನಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸ್ವೀಕರಿಸಿ ಅದನ್ನು
ಎದುರಿಸುವ ಶಿಕ್ಷಣ ನಮಗೆ ದೊರಕಬೇಕು. ಪೋಷಕರು ತಮ್ಮ
ಮಕ್ಕಳಿಗೆ ಕುಟುಂಬ ವ್ಯವಸ್ಥೆ ಸಂಬAಧಗಳ ಕುರಿತಾಗಿ ತಿಳಿ
ಹೇಳುವ ಅಗತ್ಯವಿದೆ. ತಮ್ಮ ಹೆತ್ತವರನ್ನು ಮಕ್ಕಳು,
ಕೊನೆಯವರೆಗೂ ಗೌರವದಿಂದ ಕಂಡಾಗ ಮಾತ್ರ ನಾವು ಕಲಿತ
ಶಿಕ್ಷಣಕ್ಕೆ ಮೌಲ್ಯ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ .ವಿಷ್ಣು ಗಣಪತಿ
ಭಟ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಿಂದು ವಿಪುಲವಾದ
ಅವಕಾಶಗಳಿವೆ. ಉದ್ಯೋಗವನ್ನು ಪಡೆದುಕೊಳ್ಳುವ
ಸಂದರ್ಭದಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳು ಪ್ರಯೋಜನಕಾರಿ.
ಇವುಗಳನ್ನೆಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳುವುದು ಅಗತ್ಯ.

ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು
ದುರುಪಯೋಗ ಪಡಿಸಿಕೊಳ್ಳದೆ ಅದನ್ನು ಸದ್ಬಳಕೆ
ಮಾಡಿಕೊಂಡು ಹೆಚ್ಚಿನ ಜ್ಞಾನವನ್ನು ಗಳಿಸಿ, ಉಪಯುಕ್ತವಾದ
ಮಾಹಿತಿಯನ್ನು ಪಡೆಯಬೇಕು ಎಂದು, ಶೈಕ್ಷಣಿಕ ವರ್ಷದ
ಕುರಿತಾಗಿ ಹಾಗೂ ಕಾಲೇಜಿನ ಸಮಗ್ರವಾದ ಮಾಹಿತಿಯನ್ನು
ಪೋಷಕರಿಗೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಎಚ್.ಜಿ
ಶ್ರೀಧರ್, ಕಾಲೇಜಿನ ವಿಶೇಷ ಅಧಿಕಾರಿ, ಡಾ. ಶ್ರೀಧರ್ ನಾಯ್ಕ್ ಬಿ,
ಐಕ್ಯೂಎಸಿ ಘಟಕದ ಸಂಯೋಜಕ ಹಾಗೂ ಭೌತಶಾಸ್ತ್ರ ವಿಭಾಗದ
ಮುಖ್ಯಸ್ಥ ಶಿವಪ್ರಸಾದ್ ಕೆ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ
ಕೃಷ್ಣ ಗಣರಾಜ್ ಭಟ್ ಎಸ್ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ
ಉಪನ್ಯಾಸಕಿ ಜ್ಯೋತಿ ವಿ ವಂದಿಸಿ,ಕನ್ನಡ ವಿಭಾಗದ ಉಪನ್ಯಾಸಕಿ ಡಾ.
ಮೈತ್ರಿ ಭಟ್ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ-ವಿವೇಕ್ ಚೇತನ ೨೦೨೪

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವಿಭಾಗದಿಂದ ರಾಷ್ಟ್ರೀಯ ಮಟ್ಟದ…

ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ಆಳ್ವಾಸ್ ಕಾಲೇಜು ಪುತ್ತೂರು.…

ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ Power Lifting ಸ್ಪರ್ದೆ ಯಲ್ಲಿ ಕಂಚಿನ ಪದಕ

ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ Power…

ಉಡುಪಿಯ, Thenkanidiyoor ನ ಸರಕಾರಿ ಪ್ರಥಮ ದರ್ಜೆ…

ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಭಿನ್ನ

ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಭಿನ್ನ

ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಭಿನ್ನ. ವೃತ್ತಿ…