
ಪುತ್ತೂರು: ಉಪನ್ಯಾಸಕರಾಗುವುದು ಹಲವು ವಿದ್ಯಾರ್ಥಿಗಳ
ಕನಸು. ಇದಕ್ಕೆ ಪೂರಕವಾಗಿರುವ ಪರೀಕ್ಷೆಯೇ ನೆಟ್ ಹಾಗೂ
ಕೆಸೆಟ್. ರಾಷ್ಟç ಮತ್ತು ರಾಜ್ಯ ಮಟ್ಟದಲ್ಲಿ ನಡೆಯುವ ಈ
ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸರಳವಲ್ಲ. ನಮ್ಮ ಗುರಿ
ಮತ್ತು ಪ್ರಯತ್ನ ಸರಿಯಾದ ಹಾದಿಯಲ್ಲಿದ್ದಾಗ ಎಲ್ಲವೂ
ಸಾಕಾರವಾಗುತ್ತದೆ ಎಂದು ಧನ್ಯಶ್ರೀ ಹೇಳಿದರು.
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗ, ವಿವೇಕಾನಂದ
ಸAಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ವಾಣಿಜ್ಯ
ವಿಭಾಗದ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ “ಎನ್‌ಇಟಿ ಮತ್ತು
ಕೆಸೆಟ್‌ನ ತಯಾರಿಯ ಟೆಕ್ನಿಕ್” ಎಂಬ ವಿಷಯದ ಮೇಲೆ ನಡೆದ
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಪದವಿ
ವಿಭಾಗದ ಉಪನ್ಯಾಸಕಿ ಧನ್ಯಶ್ರೀ, ನೆಟ್ ಹಾಗೂ ಕೆಸೆಟ್
ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ ಹಾಗೆಂದು
ಕ್ಲಿಷ್ಟಕರವೂ ಅಲ್ಲ. ನಮ್ಮ ಪ್ರಯತ್ನ ಸರಿಯಾದ
ಹಾದಿಯಲ್ಲಿದ್ದಾಗ ಎಲ್ಲವೂ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ
ಭಾಗಿಯಾಗಿದ್ದ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ
ರಮ್ಯಾ, ಈ ಪರೀಕ್ಷೆಗಳಲ್ಲಿ ಆಪ್ಟಿಟ್ಯೂಡ್ ರೀಸನಿಂಗ್‌ನ ಮಹತ್ವದ ಬಗ್ಗೆ
ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ
ವಿಭಾಗದ ಡೀನ್ ಡಾ. ವಿಜಯ ಸರಸ್ವತಿ, ವಾಣಿಜ್ಯ ವಿಭಾಗದ
ಉಪನ್ಯಾಸಕರಾದ ರಾಘವೇಂದ್ರ, ಶ್ವೇತ ಜೆ. ರಾವ್, ಲಕ್ಷಿö್ಮ ವಿ.ಭಟ್
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ರಾಹುಲ್ ಸ್ವಾಗತಿಸಿ, ವಿದ್ಯಾರ್ಥಿನಿ ಸುಶ್ಮಿತಾ
ವಂದಿಸಿದರು. ವಿದ್ಯಾರ್ಥಿನಿ ರಕ್ಷಿತಾ ನಿರೂಪಿಸಿದರು.