News & Updates

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ, ವಿಜ್ಞಾನಿ, ಹಾಗೂ ಸಂತರಾಗಿ
ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದವರು. ಅಂದು ನರೇಂದ್ರನಾಗಿ
ಉಳಿದವರು ವಿವೇಕಾನಂದರಾಗಲು ಅವರೊಳಗಿದ್ದ ಕಾವ್ಯಾಸಕ್ತಿ ಪ್ರಮುಖ
ಕಾರಣವಾಗಿತ್ತು. ಕಾವ್ಯವೂ ಅವರ ಪ್ರಮುಖ ಆಸಕ್ತಿಗಳಲ್ಲೊಂದಾಗಿತ್ತು. ಆವರು
ತಮ್ಮ ಕವಿತೆಗಳಿಂದ ಅನೇಕ ಕವಿಗಳಿಗೆ ಪ್ರೇರಣೆ ನೀಡಿದ್ದರು. ಸಾಹಿತ್ಯ
ಲೋಕದಲ್ಲಿ ಹೊಸ ಮಜಲುಗಳನ್ನು ತೆರೆದಿದ್ದರು. ಅವರ ಕವಿತೆಗಳು
ಯುವಜನತೆಗೆ ಮಾರ್ಗದರ್ಶನವೂ ಹೌದು ಎಂದು ಮಂಗಳೂರು ವಿಶ್ವ
ವಿದ್ಯಾನಿಲಯ, ಮಂಗಳ ಗಂಗೋತ್ರಿ, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ
ಸಹಾಯಕ ಪ್ರಾಧ್ಯಾಪಕ ಡಾ ಧನಂಜಯ ಕುಂಬ್ಳೆ ಹೇಳಿದರು.
ಇವರು ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಇದರ ವಿವೇಕಾನಂದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ,
ವಿವೇಕಾನAದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ
ನಡೆದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ದಶಮಾನದ ಆಚರಣೆಯ
ಸವಿನೆನಪಿಗಾಗಿ ರಾಷ್ಟç ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ
ಉಪನ್ಯಾಸ ಮಾಲಿಕೆ ವಿವೇಕ ಸ್ಮೃತಿಯಲ್ಲಿ ಸ್ವಾಮಿ ವಿವೇಕಾನಂದರ ಕಾವ್ಯಾಸಕ್ತಿ ಎಂಬ
ವಿಷಯದ ಕುರಿತು ಮುಖ್ಯ ಉಪನ್ಯಾಸಕರ ನೆಲೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿಕೃಷ್ಣ ಕೆ ಎನ್ ಮಾತನಾಡಿ, ವಿವೇಕಾನಂದರು ನೆಡೆದ ಬಂದ ಹಾದಿ ಎಲ್ಲರಿಗೂ
ಆದರ್ಶ. ಅವರು ಆಡಿದ ಮಾತುಗಳು, ವಿಚಾರಗಳು ವಿವಿಧ ಆಯಾಮದಲ್ಲಿ ನಮ್ಮ
ಮನಸ್ಸಲ್ಲೂ ಪ್ರಶ್ನೆಗಳು ಮೂಡುವಂತೆ ಮಾಡುತ್ತದೆ, ಅದರೆ ನಮ್ಮ
ಪ್ರಶ್ನೆಗಳಿಗೆ ಉತ್ತರವಿಲ್ಲ. ಅದರೆ ಅವರು ಅವರೊಳಗೆ ಮೂಡಿದ ಎಲ್ಲಾ
ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಕಾಲಘಟ್ಟದಲ್ಲಿ ನಾವು
ವಿವೇಕಾನಂದರ ಕುರಿತಾದ ಪುಸ್ತಕಗಳನ್ನು ಓದುವಾಗ ನಮ್ಮೊಳಗಿನ
ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಹಾಗೂ ವಿವೇಕಾನಂದರ
ಚಿAತನೆಗಳು ಯುವಪೀಳಿಗೆಗೆ ಮಾರ್ಗದರ್ಶ£ವಾಗುವುದು ಖಂಡಿತÀ.
ಮಾನಸಿಕವಾಗಿ ದೈಹಿಕವಾಗಿ ಮುಂದಿನ ದಿನಗಳನ್ನು ಎದುರಿಸುವ ಧೈರ್ಯ
ಎಲ್ಲರಲ್ಲೂ ಮೂಡಲಿ ಎಂದರು.
ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಹೆಚ್ ಜಿ ಶ್ರೀಧರ್
ಸ್ವಾಗತಿಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ
ಸAಯೋಜಕಿ ಡಾ ವಿದ್ಯಾ ಎಸ್ ವಂದಿಸಿದರು. ಸ್ನಾತ್ತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿ
ರಜತ್ ನಿರೂಪಿಸಿದರು.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…