News & Updates

ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಮಾಹಿತಿ ಕಾರ್ಯಕ್ರಮ

ಜುಲೈ16; ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತುಕೊಂಡು ಪಾಠ ಹೇಳಿಕೊಡುವುದು ಅತೀ ಮುಖ್ಯವಾದ ಕೆಲಸ. ಇತ್ತೀಚೆಗೆ ವಿದ್ಯಾರ್ಥಿಗಳು ನಾನಾ ರೀತಿಯ ಮಾನಸಿಕ ತೊಂದರೆಗೆ ಒಳಗಾಗಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.ಇಂತಹ ಸಂದರ್ಭದಲ್ಲಿ ಉಪನ್ಯಾಸಕರು ಅವರನ್ನು ಅರಿತುಕೊಳ್ಳುವುದು ಅತ್ಯಗತ್ಯ.ಹಾಗಾಗಿ ಉಪನ್ಯಾಸಕರು ಪಾಠ ಮಾಡುವುದಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆಗೆ ಆಪ್ತ ಸ್ನೇಹಿತನಂತೆಯೂ ಇರಬೇಕಾಗುತ್ತದೆ ಎಂದು ನೆಮ್ಮದಿ ಕೇಂದ್ರದ ಮನೋವೈದ್ಯೆ ಡಾ.ಶ್ರದ್ದಾ ಲಲಿತ್ ರೈ ಅಭಿಪ್ರಾಯಪಟ್ಟರು.
ಇವರು ವಿವೇಕಾನಂದ ಕಲಾ,ವಿಜ್ಞಾನ ಹಾಗೂ ಹಾಗೂ ವಾಣಿಜ್ಯ(ಸ್ವಾಯತ್ತ)ಕಾಲೇಜು ಪುತ್ತೂರು ಇಲ್ಲಿ ಉಪನ್ಯಾಸಕರಿಗೆ ಏರ್ಪಡಿಸಲಾದ ಅಧ್ಯಾಪಕರ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.

Related News

ವಿವೇಕಾನಂದ ವಿದ್ಯಾವರ್ಧಕ ಸಂಘದಿoದ ಬಾಂಗ್ಲಾವಿರುದ್ಧ ಮಾನವ ಸರಪಳಿ ಮೂಲಕ ಜನಜಾಗೃತಿ ಜಾಥಾ

ವಿವೇಕಾನಂದ ವಿದ್ಯಾವರ್ಧಕ ಸಂಘದಿoದ ಬಾಂಗ್ಲಾವಿರುದ್ಧ ಮಾನವ…

ಪುತ್ತೂರು: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವಹಿಂಸಾಚಾರವನ್ನು ವಿರೋಧಿಸಿ ಹಾಗೂ…

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ಪುತ್ತೂರು,ಅ.೫: ಆಟಿ ಎಂದರೆ ಅದು ಬೇಸಾಯದ ತಿಂಗಳು.…