News & Updates

ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ

ಪುತ್ತೂರು, ಸೆ.04: ಅಕ್ಷರಗಳು ಸೇರಿದರೆ ಪದ, ಪದಗಳು ಸೇರಿದರೆ
ವಾಕ್ಯ, ವಾಕ್ಯ ಗಳು ಸೇರಿದರೆ ಪ್ರಬಂಧ ಅದೇ ರೀತಿಯಲ್ಲಿ ಎಲ್ಲಾ
ವಿದ್ಯಾರ್ಥಿಗಳು ಜೊತೆಗೂಡಿ ವಿಜ್ಞಾನ ಸಂಘವನ್ನು ಬೆಳೆಸುವಲ್ಲಿ
ಸಹಕರಿಸಬೇಕು. ಸಂಘವು ಉತ್ತಮವಾಗಿ ವಿವಿಧ ಕಾರ್ಯಕ್ರಮಗಳನ್ನು
ನೀಡುವಲ್ಲಿ ಸಫಲವಾಗಲಿ ಎಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ
ಮಂಗಳೂರು ಇಲ್ಲಿನ ಪ್ರಾದ್ಯಾಪಕ ಮತ್ತು ಭೌತಶಾಸ್ತ್ರ ವಿಭಾಗದ
ಮುಖ್ಯಸ್ಥ ಡಾ. ಸೂರ್ಯನಾರಾಯಣ ನುಡಿದರು.
ಇವರು ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಸ್ವಾಯತ್ತ
ಪುತ್ತೂರು ಇಲ್ಲಿ ವಿಜ್ಞಾನ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ
ನಡೆದ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ‘ಎನರ್ಜಿ ಲಿಟರಸಿ’ ಎಂಬ ವಿಷಯದ
ಕುರಿತ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ನಿರ್ದೇಶಕ ಪ್ರೊ. ಶಿವಪ್ರಸಾದ್ ಕೆ. ಎಸ್,
ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಈಶ್ವರ ಪ್ರಸಾದ್, ಉಪನ್ಯಾಸಕರು, ವಿಜ್ಞಾನ
ಸಂಘದ ವಿದ್ಯಾರ್ಥಿ ನಾಯಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕ ಶಿವಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿನಿ
ಧನ್ಯಶ್ರೀ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…