News & Updates

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾವಿಧಿವಿಧಾನಗಳು ಮತ್ತು ಪ್ರಬಂದ ರಚನೆ ಕಾರ್ಯಗಾರ ಕಾರ್ಯಕ್ರಮ.

ಪುತ್ತೂರು, ನ. 14 ಸಂಶೋಧನ ವರದಿ ತಯಾರಿಸುವುದರಲ್ಲಿ
ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಎದುರಿಸುವುದು
ಸಹಜ ಇದನ್ನು ಮಾರ್ಗದರ್ಶಕರೊಂದಿಗೆ ಸಮಾಲೋಚನೆ ಮಾಡಿ
ಪರಿಹರಿಸಿಕೊಳ್ಳಬೇಕು. ತಳಮಟ್ಟದ ಅಧ್ಯಯನ, ವಿಷಯಗಳ ಆಸಕ್ತಿ
ನಮ್ಮ ಅಧ್ಯಯನಗಳನ್ನು ಬಲಗೊಳಿಸುತ್ತದೆ ಎಂದು ವಿವೇಕಾನಂದ
ತಾAತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕರಾದ ಡಾಕ್ಟರ್ ರಾಬಿನ್
ಮನೋಹರ್ ಶಿಂದೆ ತಿಳಿಸಿದರು
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ
ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಡೆದ
ಸಂಶೋಧನೆಯ ವಿಧಿ ವಿಧಾನಗಳು ಮತ್ತು ಸಂಶೋಧನಾ
ಪ್ರಬAಧವನ್ನು ರೂಪಿಸುವುದರ ಬಗ್ಗೆ ನಡೆದ ಪ್ರಾತ್ಯಕ್ಷಿಕ
ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ನಾತಕೋತ್ತರ
ವಿಭಾಗದ ನಿರ್ದೇಶಕರು, ಕಾಲೇಜಿನ ಪರೀಕ್ಷಾಂಗ ಕುಲ ಸಚಿವರು ಆದ
ಶ್ರೀಧರ್ ಹೆಚ್ ಜಿ ಮಾತನಾಡಿ ಸಂಶೋಧನೆಯ ಅಧ್ಯಯನದಲ್ಲಿ ಕಾಲಕಾಲಕ್ಕೆ
ಮಾರ್ಪಾಡುಗಳಾಗಿವೆ. ಸಂಶೋಧನೆಯ ವಸ್ತುವನ್ನು ಆರಿಸಿಕೊಳ್ಳುವಾಗ
ಮಾಹಿತಿಯ ಲಭ್ಯತೆಯ ಬಗೆಗೆ ಎಚ್ಚರಿಕೆ ವಹಿಸಿಕೊಳ್ಳುವ ಅಗತ್ಯತೆ ಇದೆ.
ಬರವಣಿಗೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಧ್ಯಯನ
ಮತ್ತು ಸಮಾಲೋಚನೆಯ ಮೂಲಕ ಪರಿಹಾರವನ್ನು
ಕಂಡುಕೊಳ್ಳಬೇಕು. ಅಡಿಟಿಪ್ಪಣಿ, ಪರಾಮರ್ಶನ ಗ್ರಂಥಗಳನ್ನು
ಸೂಚಿಸುವಲ್ಲಿ ನಿರ್ದಿಷ್ಟ ಕ್ರಮವನ್ನು ಅನುಸರಿಸುವ ಅಗತ್ಯತೆ ಇದೆ
ಜಾಲತಾಣಗಳಲ್ಲಿ ದೊರೆಯುವ ಮಾಹಿತಿಯನ್ನು ಎಚ್ಚರಿಕೆಯಲ್ಲಿ
ಬಳಸಿಕೊಳ್ಳಬೇಕು ಎಂದು ಹೇಳಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಸ್ನಾತಕೋತ್ತರ
ವಿಭಾಗದ ಡೀನ್ ವಿಜಯ ಸರಸ್ವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ
ದೀಪಶ್ರೀ ಸ್ವಾಗತಿಸಿ ರೋಹಿತ್ ವಂದಿಸಿದರು ತೇಜಸ್ವಿ ಕಾರ್ಯಕ್ರಮವನ್ನು
ನಿರೂಪಿಸಿದರು.

Related News

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂಮೂಡಬೇಕು.…

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…