News & Updates

ವಿವೇಕಾನಂದ ಕಾಲೇಜಿನಲ್ಲಿ 44 ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ:

ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವಲ್ಲಿ ಚೆಸ್ ಸಹಕಾರಿಯಾಗಿದೆ :ಶ್ರೀಹರಿ. ಪಿ

ಪುತ್ತೂರು: ಕ್ಷಣಮಾತ್ರದಲ್ಲಿಯೇ ಎದುರಾಳಿಯನ್ನು ಹೇಗೆ
ಎದುರಿಸಬೇಕೆಂದು ಯೋಚಿಸಿ ಆಡುವ ಕಲೆಯೇ ಚೆಸ್. ಚೆಸ್ ಆಟದಲ್ಲಿ
ತಾಳ್ಮೆ ಹಾಗೂ ಏಕಾಗ್ರತೆ ಬಹು ಮುಖ್ಯವಾಗಿರುತ್ತದೆ. ಆಟದಲ್ಲಿ
ಸೋಲು ಗೆಲುವು ಸರ್ವೆ ಸಾಮಾನ್ಯ , ಸೋತರೆ ಅನುಭವ,
ಗೆದ್ದರೆ ಅವಕಾಶ ಸಿಗುತ್ತದೆ ಎಂದು ಪುತ್ತೂರಿನ ಕರ್ನಾಟಕ
ಬ್ಯಾಂಕ್ ವ್ಯವಸ್ಥಾಪಕ ಮತ್ತು ಕ್ಲಸ್ಟರ್ ಮುಖ್ಯಸ್ಥ ಶ್ರೀಹರಿ. ಪಿ
ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ ದೈಹಿಕ ಶಿಕ್ಷಣ ವಿಭಾಗ
ಮತ್ತು ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಸಂಯುಕ್ತ
ಆಶ್ರಯದಲ್ಲಿ, ಮೂರು ದಿನಗಳ ಕಾಲ ನಡೆದ ಅಂತರ್ ಜಿಲ್ಲಾ,
ಅಂತರ್ ಕಾಲೇಜು ಮಟ್ಟದ44 ನೇ ಮಾನ್ಸೂನ್ ಚೆಸ್ ಪಂದ್ಯಾಟವನ್ನು
ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ
ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ. ಕೆ. ಎನ್
ಮಾತನಾಡಿ, ಈ ಮಾನ್ಸೂನ್ ಚೆಸ್ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ,
ಬುದ್ದಿಯ ವಿಕಾಸ ಹಾಗೂ ಏಕಾಗ್ರತೆಯನ್ನು ವೃದ್ಧಿಸಲು
ಸಹಕರಿಯಾಗಿದೆ.ಚೆಸ್ ನಲ್ಲಿ ಬಳಸುವ ತಂತ್ರಗಾರಿಕೆಯನ್ನು
ದೇಶದ ರಕ್ಷಣೆಯ ಸಂದರ್ಭದಲ್ಲಿಯೂ
ಉಪಯೋಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್
ಶುಭನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ
ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ
ರವಿಶಂಕರ್. ವಿ. ಎಸ್ ಸ್ವಾಗತಿಸಿ, ಉಪನ್ಯಾಸಕ ಯತೀಶ್. ಕುಮಾರ್. ಬಿ
ವಂದಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ. ಪಿ. ಆರ್
ನಿಡ್ಪಳ್ಳಿ ನಿರ್ವಹಿಸಿದರು.
ಫಲಿತಾಂಶ

Oplus_131072

ಪ್ರಥಮ-ವಿಷ್ಣು ಪ್ರಸಾದ್(ಎಸ್‌ಡಿಎಂ ಕಾಲೇಜು ಉಜಿರೆ)ದ್ವಿತೀಯ-
ಕಾರ್ತಿಕ್( ಭಂಡಾರ್‌ಕರ‍್ಸ್ ಕಾಲೇಜು ಕುಂದಾಪುರ), ತೃತೀಯ
ಸ್ಥಾನವನ್ನು ಶ್ರೇಯಸ್ ಎಂ.ಎಸ್( ಎಸ್‌ಡಿಎಂ ಕಾಲೇಜು ಉಜಿರೆ)
ಪಡೆದುಕೊಂಡರೆ ನಂತರದ 7 ಸ್ಥಾನವನ್ನು ಕ್ರಮವಾಗಿ
ನಿಶಾಂತ್ ಗ್ರೆಗರಿ ಡಿಸೋಜಾ(ಡಾ.ಬಿ.ಬಿ ಹೆಗ್ಡೆ ಕುಂದಾಪುರ),ಜೇಡನ್
ಫೆರ್ನಾAಡಿಸ್( ಸಂತ ಅಲೋಷಿಯಸ್ ಕಾಲೇಜು ಮಂಗಳೂರು),
ಆದಿತ್ಯ( ಸಂತ ಅಲೋಷಿಯಸ್ ಮಂಗಳೂರು),ಕೌಶಿಕ್
ಕಾರ್‌ಸ್ಟಿçÃಟ್ ಕಾಲೇಜು ಮಂಗಳೂರು),ಭಾಸ್ಕರ(ಎಸ್‌ಡಿಎA
ಕಾಲೇಜು),ಸ್ವಸ್ತಿಕ್ ಬಂಗೇರ (ವಿವೇಕಾನಂದ ಕಾಲೇಜು
ಪುತ್ತೂರು), ಆಯುಷ್ ಶೆಟ್ಟಿ(ಸಹ್ಯಾದ್ರಿ ಕಾಲೇಜು
ಮಂಗಳೂರು) ಪಡೆದುಕೊಂಡಿದ್ದಾರೆ.
ಉತ್ತಮ ಮಹಿಳಾ ಆಟಗಾರರಾಗಿ ಆಯೆನಾ ಫಾತಿಮಾ(ಸಂತ
ಆಗ್ನೇಸ್),ದೀಪಿಕಾ(ವಿವೇಕಾನAದ ಕಾಲೇಜು ಪುತ್ತೂರು), ನಿಶಾ
ಆರ್.ಎಸ್ (ವಿವೇಕಾನಂದ ಕಾಲೇಜು ಪುತ್ತೂರು)

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…