
ಪುತ್ತೂರು; ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಕನ್ನಡ
ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಪ್ರಸ್ತುತ ಪರೀಕ್ಷಾಂಗ
ಕುಲಸಚಿವರಾಗಿ ಕರ್ಯನಿರ್ವಹಿಸುತ್ತಿರುವ ಡಾ.ಶ್ರೀಧರ ಎಚ್.ಜಿ ಅವರ
ಚಪಡ ಕಾದಂಬರಿಗೆ ‘ಚದುರಂಗ ದತ್ತಿ’ ಪ್ರಶಸ್ತಿ ಲಭಿಸಿದೆ. ಕರ್ನಾಟಕ
ಸಾಹಿತ್ಯ ಅಕಾಡೆಮಿ ಬೆಂಗಳೂರು 2021 ನೇಯ ಸಾಲಿನ ವಿವಿಧ ದತ್ತಿ
ಪ್ರಶಸ್ತಿಗಳ ಆಯ್ಕೆಯಲ್ಲಿ ಪುತ್ತೂರಿನ ಡಾ.ಶ್ರೀಧರ ಎಚ್.ಜಿ ಅವರು
ರಚಿಸಿದ ‘ಚಪಡ’ ಕಾದಂಬರಿಯು &quoಣ;ಚದುರಂಗ &quoಣ; ಎನ್ನುವ ದತ್ತಿ
ಪ್ರಶಸ್ತಿಗೆ ಆಯ್ಕೆಯಾಗಿದೆ.
ಡಾ.ಶ್ರೀಧರ ಎಚ್.ಜಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ
ಮುಂಡಿಗೆಹಳ್ಳದವರಾಗಿದ್ದು ಪುತ್ತೂರಿನ ವಿವೇಕಾನಂದ
ಕಾಲೇಜಿನಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಪ್ರಾಧ್ಯಾಪನ
ವೃತ್ತಿಯಲ್ಲಿ ತೊಡಗಿಸಿಕೊಂಡು ನಿವೃತ್ತರಾಗಿದ್ದು ಸಾಹಿತ್ಯ
ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಗೈದಿದ್ದಾರೆ. ಹಲವಾರು ನಾಟಕ,
ವಿಮರ್ಶೆ, ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರಿಗೆ
‘ವಸುದೇವ ಭೂಪಾಲಂ’,’ಮಲ್ಲೇಪುರA ಪ್ರಶಸ್ತಿ’, ‘ಸಹೃದಯ
ಪ್ರಾಧ್ಯಾಪಕ’ ಪ್ರಶಸ್ತಿ,’ ‘ಚಡಗ ಕಾದಂಬರಿ’ ಪ್ರಶಸ್ತಿಗಳೂ
ಲಭಿಸಿದೆ.
ಅಂತೆಯೇ ಇವರ ಚಪಡ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕೊಡಲ್ಪಡುವ ಚದುರಂಗ ಪ್ರಶಸ್ತಿಗೆ ಆಯ್ಕೆಯಾಗಿರುವ
ಬಗೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,
ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಬಂಧುಗಳು
ಶುಭಾಶಯ ವ್ಯಕ್ತಪಡಿಸಿದ್ದಾರೆ.
