News & Updates

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮ

ಪುತ್ತೂರು, ಮಾ.25: ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇವರು ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಹಕಾರದೊಂದಿಗೆ ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ,
ಲಲಿತ ಕಲಾ ಸಂಘ ಮತ್ತು ಐಕ್ಯೂಎಸಿ ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ
ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮ ನೆರವೇರಿತು.
ಪೂರ್ವಾಹ್ನದ ರಾಗ ಆಹಿರ್ ಭೈರವ್‌ನಲ್ಲಿ ಆಲಾಪ್, ಮಧ್ಯಲಯ್ ರೂಪಕ್ ಹಾಗೂ ದೃತ್ ತೀನ್ ತಾಳದ ಸಂಯೋಜನೆ ಹಾಗೂ
ಅಪರಾಹ್ನದ ರಾಗವಾದ ಬೃಂದಾವನಿ ಸಾರಂಗ್ ರಾಗವನ್ನು ದೃತ್ ಹಾಗೂ ಅತಿ ದೃತ್ ತೀನ್ ತಾಳದಲ್ಲಿ ಮನೋಹರವಾದ
ಬಾನ್ಸುರಿ ವಾದನ ಕಾರ್ಯಕ್ರಮ ನಡೆಯಿತು. ಬಾನ್ಸುರಿ ವಾದನದಲ್ಲಿ ಮಾಸ್ಟರ್ ಕಾರ್ತಿಕ್ ಭಟ್ ಮಂಗಳೂರು, ತಬಲಾದಲ್ಲಿ
ಮಾಸ್ಟರ್ ಹೇಮಂತ ಜೋಶಿ ಧಾರವಾಡ ಅತ್ಯುತ್ತಮವಾದ ಕಚೇರಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು
ಪರೀಕ್ಷಾಂಗ ಕುಲಸಚಿವರಾದ ಹೆಚ್. ಜಿ ಶ್ರೀಧರ್, ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇದರ ನಿರ್ದೇಶಕ ಭಾರವಿ
ದೇರಾಜೆ, ಪುತ್ತೂರಿನ ಹಿರಿಯ ಕಲಾವಿದ ಮಾರುತಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ. ಬಿ ಕಲಾವಿದರನ್ನು ಪರಿಚಯಿಸಿ, ಸ್ವಾಗತಿಸಿದರು. ಸಮಾಜಶಾಸ್ತ್ರ
ವಿಭಾಗದ ಉಪನ್ಯಾಸಕಿ ವಿದ್ಯಾ ಧನ್ಯವಾದ ಸಮರ್ಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…