News & Updates

ಶಕ್ತಿಯ ಆದಿದೇವ ಹನುಮಂತ: ಶುಭ ಅಡಿಗ

ಪು.ಮೇ,13: ಒಂದು ಒಂದು ದೋಹಗಳಲ್ಲಿ ಹನುಮಂತನ ವ್ಯಕ್ತಿತ್ವ , ಸಾಹಸವನ್ನು ನಾವು ಅರಿಯಬಹುದು. ವಿದ್ಯಾ,ಬುದ್ಧಿ ಆತ್ಮಸ್ಥೈರ್ಯದ ಅಧಿದೇವನಾಗಿ ಹನುಮಂತನನ್ನು ಪೂಜಿಸುತ್ತಾರೆ. ಹನುಮಂತನ ಕುರಿತ ಅನೇಕ ವೀರಗಾಸೆಗಳನ್ನು ನಾವು ಕೇಳಬಹುದು. ಪ್ರತಿಯೊಂದು ಅವನ ಜೀವನದ ನಡೆಯು ನಮಗೆ ದಾರಿ ದೀಪಾಗಬೇಕು. ವಿಷಯ ಜ್ಞಾನದ ಜೊತೆ ಜೊತೆಯಲ್ಲಿ ವ್ಯಕ್ತಿತ್ವ ರೂಪುಗೊಳ್ಳಬೇಕು. ವಿದ್ಯೆಯ ಜೊತೆಗೆ ಆಧ್ಯಾತ್ಮ ಬೇಕು. ನಮ್ಮತನವಾದ ಸಂಸ್ಕೃತಿ, ಸನಾತನ ಧರ್ಮವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭ ಅಡಿಗ ಹೇಳಿದರು.

ಇವರು ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಐಕ್ಯೂಎಸಿ , ಹಿಂದಿ ವಿಭಾಗ ಮತ್ತು ಹಿಂದಿ ಸಂಘ ಆಶ್ರಯದಲ್ಲಿ ಆಯೋಜಿಸಿದ ಹನುಮಾನ್ ಚಾಲೀಸ್ ಪಠಣ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿಶೇಷ ಅಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯಕ್ ಮಾತನಾಡಿ, ಭಾರತೀಯರು ಪ್ರಕೃತಿ ಆರಾಧಕರು. ಭಾರತವನ್ನು ಗುರುತಿಸುವುದು ಧಾರ್ಮಿಕ ಹಿನ್ನೆಲೆಯಲ್ಲಿ. ಭಾರತೀಯರ ಸಂಸ್ಕೃತಿ ವಿಶಿಷ್ಟ ಹಾಗೂ ವಿಶೇಷವಾದದ್ದು. ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಶಕ್ತಿ ಯುಕ್ತಿಗಾಗಿ ಹನುಮಾನ್ ಚಾಲೀಸ್ ಪಠಣ ಮಾಡುವುದು ಒಳಿತು. ಭವ್ಯ ಭಾರತದ ಸಾಂಸ್ಕೃತಿಕ ರಾಯಭಾರಿ ವಿದ್ಯಾರ್ಥಿಗಳು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಹಿಂದಿ ವಿಭಾಗದ ಮುಖ್ಯಸ್ಥೆ, ಕಲಾ ವಿಭಾಗದ ಡೀನ್ ಡಾ.ದುರ್ಗಾರತ್ನ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…