News & Updates

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂ
ಮೂಡಬೇಕು. ಆಲೋಚನೆಗಳು ನಿರ್ದಿಷ್ಟ ಪರಿಧಿಗೆ ಸೀಮಿತವಾಗದೆ, ವಿವಿಧ
ಆಯಾಮಗಳಲ್ಲಿ ಚಿಂತಿಸುವಂತಾಗಬೇಕು. ಉದ್ಯೋಗಾಕಾಂಕ್ಷಿಗಳಾಗದೆ
ಉದ್ದಿಮೆದಾರನಾಗಬೇಕು ಎಂದು ಕುಂಬ್ಳೆ ಸಮೂಹ ಸಂಸ್ಥೆಗಳ ನಿರ್ದೇಶಕ
ಕುಂಬ್ಳೆ ನರಸಿಂಹ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ
ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ‘ಉದ್ಯಮಶೀಲತೆ- ಕಲ್ಪನೆಯಿಂದ
ವಾಸ್ತವಕ್ಕೆ ಪರಿವರ್ತನೆ’ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಉಪನ್ಯಾಸ
ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣಮೂರ್ತಿ, ಅಜಿಂ ಪ್ರೇಮ್‍ಜಿ ಇನ್ಫೋಸಿಸ್, ವಿಪ್ರೋ ಕಂಪನಿಗಳನ್ನು ಕಟ್ಟುವ
ಬಗ್ಗೆ ಯೋಚನೆಯೇ ಮಾಡದೆ ಉದ್ಯೋಗಿಯಾಗಿರುತ್ತೇನೆಂದು ಚಿಂತಿಸಿದ್ದರೆ
ಇವತ್ತು ಇನ್ಫೋಸಿಸ್, ವಿಪ್ರೋ ಇಂತಹ ಅದೆಷ್ಟೋ ಕಂಪನಿಗಳು ಇರುತ್ತಿರಲಿಲ್ಲ.
ಯುವಜನತೆಗೆ ಉದ್ಯೋಗಾವಕಾಶಗಳೇ ಇಲ್ಲ ಅನ್ನೋ ಪರಿಸ್ಥಿತಿಯೂ
ಬಂದಿರುತ್ತಿತ್ತು. ಹೀಗಾಗಿ ಉದ್ಯೋಗಾಕಾಂಕ್ಷಿಯಾಗುವ ಕನಸು ಕಾಣಬೇಡಿ ಉದ್ದಿಮೆ
ಕಟ್ಟುವ ಕನಸು ಕಾಣಿ. ಉದ್ದಿಮೆ ಹೂವಿನ ಹಾಸಿಗೆಯಲ್ಲ ಹಾಗೆಂದು ಕಷ್ಟದ ದಾರಿಯಲ್ಲಿ
ನಡೆಯದ ಹೊರತು ಸುಖ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಸಂಚಾಲಕ ಮುರಳಿ
ಕೃಷ್ಣ ಕೆ. ಎನ್, ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು
ಕಂಡುಕೊಳ್ಳುವ ಕೆಲಸವನ್ನು ಮಾಡಬೇಕು. ಭಿನ್ನವಾದ ರೀತಿಯಲ್ಲಿ
ಆಲೋಚನೆ ಮಾಡಿದಾಗ ಯಶಸ್ಸು ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಮತ್ತು ಕಾಲೇಜಿನ
ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಹೆಚ್.ಜಿ. ಸ್ನಾತಕೋತ್ತರ ವಿಭಾಗದ ಡೀನ್ ಡಾ.
ವಿಜಯಸರಸ್ವತಿ, ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ
ಸ್ವಾಗತಿಸಿ, ಉಪನ್ಯಾಸಕಿ ಲಕ್ಷ್ಮಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ
ನಿರೂಪಿಸಿದರು.

ಫೋಟೋ ಕ್ಯಾಪ್ಶನ್: ವೇದಿಕೆಯಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್
ವಿಜಯಸರಸ್ವತಿ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಕುಂಬ್ಳೆ ಸಮೂಹ
ಸಂಸ್ಥೆಗಳ ನಿರ್ದೇಶಕ ನರಸಿಂಹ ಪ್ರಭು, ಸ್ನಾತಕೋತ್ತರ ವಿಭಾಗದ
ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಹೆಚ್.ಜಿ ಉಪಸ್ಥಿತರಿದ್ದರು.

Related News

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಪುತ್ತೂರು. ಅ, 22:*ಮಾನವನ ದೇಹದಲ್ಲಿ 5 ಲೀಟರ್ನಷ್ಟು…

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ ನುಡಿನಮನ.

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ…

ದಿ.ಭಾಸ್ಕರ ಬಿ ಅವರ ಸಮರ್ಪಣಾ ಮನೋಭಾವನಮಗೆಲ್ಲ ಮಾದರಿ:ಡಾ.ಪ್ರಭಾಕರ್…

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂಮೂಡಬೇಕು.…