News & Updates

ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ ಜೆ ರಾವ್;

ಪುತ್ತೂರು ಮೇ.7: ಕೆಲಸವನ್ನು ಹುಡುಕುವ ಅಭ್ಯರ್ಥಿಗಳಲ್ಲಿ
ಇರಬೇಕಾದ ಮೂಲಭೂತ ವಸ್ತು ರೆಸ್ಯೂಮ್. ಆಕಾಂಕ್ಷಿಯು ಹಲವಾರು
ತಂತ್ರಗಳನ್ನು ರೆಸ್ಯೂಮ್ ಸಿದ್ಧಪಡಿಸುವಾಗ ಬಳಸಬೇಕಾಗುತ್ತದೆ.
ಉತ್ತಮ ರೆಸ್ಯೂಮ್ ಒಳ್ಳೆಯ ಅಭಿಪ್ರಾಯಗಳನ್ನು ಸೃಷ್ಟಿಸಿ,
ಕೆಲಸವನ್ನು ಭದ್ರಪಡಿಸುತ್ತದೆ ಎಂದು ವಿವೇಕಾನಂದ ಸ್ನಾತಕೋತ್ತರ
ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಜೆ. ರಾವ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಟ್ರೈನಿಂಗ್
ಮತ್ತು ಪ್ಲೇಸ್ಮೆಂಟ್ ಸೆಲ್ ವತಿಯಿಂದ ನಡೆದ &quoಣ;ಅನ್ ಲಾಕಿಂಗ್ ಯುವರ್
ಫ್ಯೂಚರ್&quoಣ; ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಮಾತನಾಡಿ,
ತರಗತಿಯೊಳಗೆ ನಡೆಯುವ ಪಾಠ, ಪಠ್ಯದ ವಿಚಾರಗಳನ್ನು ಮಾತ್ರ
ಕಲಿಸುತ್ತದೆ. ಜೀವನಕ್ಕೆ ಅಗತ್ಯವಿರುವ ಪ್ರಾಯೋಗಿಕ ಜ್ಞಾನಗಳು
ಲಭ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಪಾಠದ ಜೊತೆ ಜೊತೆಗೆ ಪ್ರಾಯೋಗಿಕ
ಅಂಶಗಳನ್ನು ಕಲಿಯಬೇಕು. ಅವಕಾಶಗಳನ್ನು ಬಳಸಿಕೊಂಡು
ಭವಿಷ್ಯವನ್ನು ರೂಪಿಸಬೇಕು. ಜೀವನದಲ್ಲಿ ಎಂತಹದ್ದೇ ಸನ್ನಿವೇಶಗಳು
ಎದುರಾದರೂ ಎದುರಿಸಲು ಸಿದ್ಧರಿರಬೇಕು ಎಂದರು.
ಕಾಲೇಜಿನ ದ್ವಿತೀಯ ಎಂ.ಎಸ್ಸಿ ವಿಭಾಗದ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ
ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಕಲಾಸಪ್ತ-2025;

ವಿವೇಕಾನಂದ ಕಾಲೇಜಿನಲ್ಲಿ ಕಲಾಸಪ್ತ-2025;

ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಿಪುತ್ತೂರು: ಸಾಮಾಜಿಕ ಜಾಲತಾಣಗಳು ಜನರ…

ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ. ಬಾಲಸುಬ್ರಮಣ್ಯಂ;

ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ.…

ಪುತ್ತೂರು ಏ.8: ನಮ್ಮ ಹಿರಿಯರು ಕೈಯಲ್ಲೇ ಭೂಮಿ…

ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ ಜೆ ರಾವ್;

ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ರೆಸ್ಯೂಮ್: ಶ್ವೇತಾ…

ಪುತ್ತೂರು ಮೇ.7: ಕೆಲಸವನ್ನು ಹುಡುಕುವ ಅಭ್ಯರ್ಥಿಗಳಲ್ಲಿಇರಬೇಕಾದ ಮೂಲಭೂತ…