News & Updates

ಜಗತ್ತಿನ ಹಿತಕ್ಕಾಗಿ ಹಿಂದೂ ಸಮಾಜ ಒಂದಾಗಬೇಕು 78ನೇ ಸ್ವಾತಂತ್ರ‍್ಯೋತ್ಸವದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿಕೆ.

ಪುತ್ತೂರು, ಆ. 15: ವಿದೇಶಿಯರ ಗುಲಾಮಕ್ಕೆ ಒಳಗಾಗಿದ್ದ
ಭಾರತೀಯರಿಗೆ ಸ್ವಾತಂತ್ರ‍್ಯ ದೊರತು ಇಂದಿಗೆ 78
ವರ್ಷಗಳಾಯಿತು. ಹಲವಾರು ದೇಶ ಭಕ್ತರ ತ್ಯಾಗ ಬಲಿದಾನದಿಂದ
ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ದೊರಕಿತು. ಮಹಿಳೆಯರು ತಮ್ಮ
ದೇಶಕ್ಕಾಗಿ ಹೋರಾಟ ಮಾಡಿದ ಇತಿಹಾಸ ಇದ್ದರೆ ಅದು ಭಾರತದಲ್ಲಿ
ಮಾತ್ರ, ಆದರೆ ನೋವಿನ ಭಾಗ ಅಖಂಡ ಹಿಂದುಸ್ಥಾನ
ತ್ರಿಭಾಗವಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಡೀ ಜಗತ್ತಿಗೆ
ತಲೆನೋವು ಆಗಿ ಪರಿಣಮಿಸಿದೆ .ಜಗತ್ತಿನಲ್ಲಿರುವ ಹಿಂದೂಗಳ ಮೇಲೆ
ಆಕ್ರಮಣ ನಡೆಯುತಿದ್ದು,ಬಾಂಗ್ಲಾದೇಶದಲ್ಲಿ ಹಿಂದುಗಳ
ನರಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅನ್ಯಾಯಕ್ಕೆ ಒಳಗಾದ
ಹಿಂದೂಗಳ ಪರ ಮಾತನಾಡುವವರು ನಾವಾಗಬೇಕು. ಅದಕ್ಕಾಗಿ
ಹಿಂದೂ ಸಮಾಜ ಒಂದಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ
ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಆವರಣ ನೆಹರೂ
ನಗರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ
ಪುತ್ತೂರು(ರಿ)ಮತ್ತು ವಿವೇಕಾನಂದ ವಿದ್ಯಾ ಸಂಸ್ಥೆಗಳು
ಆಯೋಜಿಸಿದ 78ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದ
ಧ್ವಜಾರೋಹಣಗೈದು ಮಾತನಾಡಿದರು.
ಸರ್ವಜೀವಲೋಕಕ್ಕೆ ಒಳಿತಾಗಲೆಂದು ಬಯಸುವ
ಏಕಮಾತ್ರ ದೇಶ ಅದು ಭಾರತ. ನಾನು, ನನ್ನ ಕುಟುಂಬ, ನನ್ನ
ಸಮಾಜ ಉಳಿಯಬೇಕಾದರೆ ಹಿಂದುಗಳಾದ ನಾವು ಒಂದಾಗಬೇಕು.
ಹಿAದು ಸಮಾಜದವರು ಜಾತಿ, ಪ್ರಾಂತ್ಯಗಳ ಹೆಸರಿನಲ್ಲಿ ಒಡೆದು
ಹೋಗಿದ್ದಾರೆ. ಇದನ್ನೆಲ್ಲಾ ಮರೆತು ಹಿಂದುಗಳು ಒಂದಾಗಬೇಕು.
ಹಿAದೂ ಎದ್ದು ನಿಂತಾಗ, ಒಟ್ಟಾದಾಗ ಜಗತ್ತೇ ಗೌರವ ನೀಡುತ್ತದೆ.
ಹಿಂದೂ ಸಮಾಜ ತನ್ನ ದೇಶವನ್ನು, ಜಗತ್ತನ್ನು ಉಳಿಸುವುದಕ್ಕಾಗಿ
ಬದುಕಬೇಕಾಗಿದೆ. ಸ್ವಾತಂತ್ರ‍್ಯ ಸ್ವೇಛ್ಚಾಚಾರವಾಗಬಾರದು.
ಲಕ್ಷಾಂತರರ ಬಲಿದಾನದಿಂದ ದೊರೆತ ಸ್ವಾತಂತ್ರ‍್ಯವನ್ನು
ಉಳಿಸಿಕೊಳ್ಳುವ ದೊಡ್ಡ ಕಾಯಕ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ, ನಮ್ಮ ದೇಶವನ್ನು ಮಾದಕ ವ್ಯಸನ
ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳನ್ನು
ಮಾಡುತ್ತೇವೆ ಎಂದು ಪ್ರಮಾಣವಚನವನ್ನು ಸ್ವೀಕರಿಸಲಾಯಿತು.
ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ
ಸದಸ್ಯರು, ಪ್ರಾಂಶುಪಾಲರು, ಬೋಧಕ- ಬೋಧಕೇತರ
ವೃಂದ ಮತ್ತು ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.
ಶ್ರೀಶ ಕುಮಾರ ಎಂ.ಕೆ ನಿರ್ವಹಿಸಿದರು.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…