
ವಿವೇಕಾನಂದ ವಿದ್ಯಾವರ್ಧಕ ಸಂಘದಿAದ
ಸoಭ್ರಮದಿAದ ಸ್ವಾತಂತ್ರö್ಯ ದಿನಾಚರಣೆ
ಪುತ್ತೂರು : ಸ್ವಾತಂತ್ರ‍್ಯ ದಿನವೆಂದರೆ ದೇಶದ ವಿಜಯವನ್ನು
ಸಂಭ್ರಮಿಸುವ ದಿನ. ನಮ್ಮ ದೇಶದ ಮೇಲೆ ಭಯೋತ್ಪಾದಕರ
ದಾಳಿಯಾದಾಗ ದೇಶ ತಲೆ ತಗ್ಗಿಸಿ ನಿಂತಿಲ್ಲ ಬದಲಾಗಿ
ಪ್ರತ್ಯುತ್ತರವನ್ನು ನಮ್ಮ ಸೇನೆ ಹೆಮ್ಮೆಯಿಂದ ನೀಡಿದೆ. ಹಿಂದೂ
ಧರ್ಮವನ್ನು ನಾಶ ಮಾಡುವುದೇ ಭಯೋತ್ಪಾದಕರ
ಉದ್ದೇಶವಾಗಿತ್ತು. ಆದ್ದರಿಂದ ನಮ್ಮೊಳಗೆ ಇನ್ನಷ್ಟು ಒಗ್ಗಟ್ಟನ್ನು
ಬಲಪಡಿಸಬೇಕಾಗಿದೆ. ಕುಟುಂಬ ವ್ಯವಸ್ಥೆ ಬಲಿಷ್ಟವಾಗುವ ಮುಖೇನ
ದೇಶವನ್ನು ಸುಭ್ರದಗೊಳಿಸಬೇಕಾಗಿದೆ ಎಂದು ವಿವೇಕಾನಂದ
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್
ನುಡಿದರು.
ಇವರು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ
ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ
ಎಪ್ಪತ್ತೊಂಭತ್ತನೇಯ ಸ್ವಾತಂತ್ರ‍್ಯೋತ್ಸವದ
ಧ್ವಜಾರೋಹಣವನ್ನು ನಡೆಸಿ ಮಾತನಾಡಿ, ಸ್ವದೇಶಿ ಭಾವ
ನಮ್ಮಲ್ಲೆರಲ್ಲಿ ಆಳವಾಗಿ ಬೆಳೆಯಬೇಕು. ನಾವು
ಭಾರತೀಯರೆಲ್ಲರೂ ಒಂದೇ ಎಂಬ ಭಾವ ನಮ್ಮಲ್ಲಿ ಮೂಡಬೇಕು.
ನಮ್ಮ ದೇಶದ ಧರ್ಮ,ಮೌಲ್ಯ,ಸಂಸ್ಕೃತಿಯನ್ನು ಉಳಿಸುವುದು
ಅವಶ್ಯಕ ಎಂಬ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ
ವಿಭಾಗದ ವಿದ್ಯಾರ್ಥಿಗಳು ಸ್ವಾತಂತ್ರö್ಯ ದಿನಾಚರಣೆಯ
ಪ್ರಯುಕ್ತ ರೂಪಿಸಿದ ಪ್ರಾಯೋಗಿಕ ಪತ್ರಿಕೆ “ವಿಕಾಸ’ ವನ್ನು
ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಬಿಎಸ್‌ಎಫ್ ಯೋಧ ಚಂದಪ್ಪ ಮೂಲ್ಯ,
ಹಾಗೂ ಇಪ್ಪತ್ತು ಬಿಎಸ್ಎಫ್ ಯೋಧರು, ವಿದ್ಯಾವರ್ಧಕ ಸಂಘದ
ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್, ವಿದ್ಯಾವರ್ಧಕ ಸಂಘದ
ಖಜಾAಜಿ ಅಚ್ಚುತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ನಡೆಯಿತು.
ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪದವಿಪೂರ್ವ ಕಾಲೇಜು, ಪದವಿ
ಕಾಲೇಜು, ಪಾಲಿಟೆಕ್ನಿಕ್ ಸಂಸ್ಥೆ, ಇಂಜಿನಿಯರಿAಗ್ ಹಾಗೂ
ಫಾರ್ಮಾಸ್ಯುಟಿಕಲ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು,
ಪ್ರಾಂಶುಪಾಲರು, ಉಪನ್ಯಾಸಕರು ಉಪನ್ಯಾಸಕೇತರ ವೃಂದ
ಹಾಗೂ ವಿದ್ಯಾರ್ಥಿಗಳು ಭಾಗವಹಿಸದ್ದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ
ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿಗಳು
ಪ್ರಾರ್ಥಿಸಿದರು.
ಬಾಕ್ಸ್
ಭಾರತೀಯ ಸೇನೆಯಲ್ಲಿ ಸೇವೆಗೈದು
ನಿವೃತ್ತಿಗೊಂಡ ಬಿಎಸ್‌ಎಫ್ ನ ಸುಮಾರು ಇಪ್ಪತ್ತು
ಮಂದಿ ವೀರ ಯೋಧರು ಪಾಲ್ಗೊಂಡಿದ್ದು ಈ
ಬಾರಿಯ ಸ್ವಾತಂತ್ರö್ಯ ದಿನಾಚರಣೆಯಲ್ಲಿ ವಿಶೇಷ
ಆಕರ್ಷಣೆಯಾಗಿತ್ತು