News & Updates

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ ಭಾಷೆ ಭಾರತೀಯ ಸಂಸ್ಕೃತಿಯ ಪ್ರತೀಕ. ಹಿಂದಿ ಇಂಗ್ಲಿಷ್ ಗಿಂತಲೂ ಹಳೆಯ ಭಾಷೆಯಾಗಿದೆ.ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ನಮ್ಮ ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ.ಭಾಚೆ ಎನ್ನುವುದು ಅಭಿವ್ಯಕ್ತಿಯ ಸಾಧನವೂ ಹೌದು.ಪರಸ್ಪರ ಸಂಪರ್ಕ ಹಾಗೂ ಅರ್ಥೈಸುವಿಕೆಗೆ ಭಾಷೆ ಎಂದೆಂದಿಗೂ ಅತ್ಯಗತ್ಯ” ಎಂದು ವಿವೇಕಾನಂದ ಕಾಲೇಜಿನ ಕಲಾ ವಿಭಾಗದ ಡೀನ್ ಬಾಲಕೃಷ್ಣ.ಹೆಚ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ ) ಮಹಾವಿದ್ಯಾಲಯ ಪುತ್ತೂರು ಇಲ್ಲಿನ ಐಕ್ಯೂಎಸಿ ಮತ್ತು ಹಿಂದಿ ವಿಭಾಗ ಹಾಗೂ ಹಿಂದಿ ಸಂಘದ ವತಿಯಿಂದ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಮತ್ತು ಹಿಂದಿ ಸಂಘದ ಸಂಯೋಜಕಿ ಡಾ. ದುರ್ಗಾರತ್ನ, ವಿಭಾಗದ ಅಧ್ಯಾಪಕಿ ಪೂಜಾ ವೈ.ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿಂದಿ ದಿವಸ್ ಅಂಗವಾಗಿ ನಡೆಸಿದ ಸ್ಪರ್ಧೆಗಳ ಬಹುಮಾನಿತರಿಗೆ ಬಹುಮಾನವನ್ನು ವಿತರಿಸಲಾಯಿತು ಮತ್ತು ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದೀಪ್ತಿ ಪ್ರಭು ಪ್ರಾರ್ಥಿಸಿ,ಅಮೃತಲಕ್ಷ್ಮಿ ಸ್ವಾಗತಿಸಿ, ಚೈತ್ರ ಪೂಜಾರಿ ವಂದಿಸಿ, ಶ್ರಮಿತ್.ರೈ ನಿರೂಪಿಸಿದರು.

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…