
ವಿವೇಕಾನಂದ ಕಾಲೇಜಿನಲ್ಲಿ ಬರವಣಿಗೆ ಕೌಶಲ್ಯದ ಕುರಿತು
ಕರ್ಯಾಗಾರ.
ಪುತ್ತೂರು:ನಮ್ಮ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಎನ್ನುವುದು
ಕಲಿಯುವ ಒಂದು ಹಂತ. ಆದುದರಿಂದ ನಾವೊಬ್ಬ ಒಳ್ಳೆಯ
ಬರಹಗಾರನಾಗಬೇಕಾದರೆ ಮೊದಲು ಒಳ್ಳೆಯ
ಓದುಗನಾಗಬೇಕು. ನಾವು ಏನನ್ನು ಓದಿದ್ದೇವೋ ಮತ್ತು
ಏನನ್ನು ಕಲಿಯುತ್ತಿದ್ದೇವೋ ಅದರಿಂದ ಸ್ಪೂರ್ತಿ ಪಡೆದು
ಬರೆಯಲು ಪ್ರಾರಂಭಿಸಬೇಕು. ನನಗೆ ಎಲ್ಲವೂ ತಿಳಿದಿದೆ
ಎನ್ನುವುದಕ್ಕಿಂತ, ನನಗೆ ಏನು ತಿಳಿದಿಲ್ಲ ಎನ್ನುವ ಮನೋಭಾವ
ನಮ್ಮಲ್ಲಿ ಬಂದಾಗ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು
ಸಾಧ್ಯಗುತ್ತದೆ. ಆ ಕಾರಣಕ್ಕಾಗಿ ನಮ್ಮ ಮನಸ್ಸನ್ನು ಸದಾ
ತೆರೆದಿಟ್ಟುಕೊಳ್ಳಬೇಕು ಹಾಗೂ ಬರವಣಿಗೆಯ ಆರಂಭದಲ್ಲಿ
ಸರಳವಾದ ವಿಷಯದಿಂದಲೇ ಬರೆಯಲು ಪ್ರಾರಂಭಿಸಿ ಎಂದು
ವಿವೇಕಾನAದ ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ
ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಐಕ್ಯೂಎಸಿ ಘಟಕ, ಆಂಗ್ಲ
ವಿಭಾಗ, ಪತ್ರಿಕೋದ್ಯಮ ಮತ್ತು ಕನ್ನಡ ವಿಭಾಗಗಳ
ಸಹಯೋಗದಲ್ಲಿ ಆಯೋಜಿಸಿದ ಬರವಣಿಗೆ ಕೌಶಲ್ಯಗಳ ಕುರಿತ
ನಡೆದ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು..
ಕರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ
ಕೇರಳದ ಪ್ರಾದೇಶಿಕ ವಿಜ್ಞಾನ ಮತ್ತು ಮಾನವಿಕ ಕಾಲೇಜಿನ
ಆಂಗ್ಲ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ
ಪ್ರೊ.ಪ್ರಣವ್ ಕೆ ಮಾತನಾಡಿ, ನಮ್ಮ ಕಲಿಕೆಗೆ ಪೂರಕವಾಗಿ,
ಪ್ರಸ್ತುತ ಹಲವಾರು ಉದ್ಯೋಗವಕಾಶಗಳಿವೆ. ಆದರೆ ಎಲ್ಲದಕ್ಕೂ
ಮುಖ್ಯವಾಗಿ ಬೇಕಾಗಿರುವುದು ಕೌಶಲ್ಯ ಮತ್ತು ಸೃಜನಶೀಲತೆ.
ಹಾಗಾಗಿ ಆ ವೃತ್ತಿಯನ್ನು ನಿರ್ವಹಿಸಲು ನಾವು ನಿಪುಣರಾಗಿರಬೇಕು
ಎಮದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ ಹೆಚ್. ಜಿ
ಶ್ರೀಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಂಗ್ಲೀಷ್, ಪತ್ರಿಕೋದ್ಯಮ ಮತ್ತು
ಕನ್ನಡ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು
ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು
ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿಗಳಾದ ಅಕ್ಷತಾ ಎಲ್ ಸ್ವಾಗತಿಸಿ,
ಸುಮೇಧ ಕೆ.ಎಸ್ ಭಟ್ ವಂದಿಸಿ, ನಿಭಾ ಹಾಗೂ ಪ್ರಸಾದಿನಿ ನಿರ್ವಹಿಸಿದರು.
