News & Updates

ಬಯೋಟೆಕ್ನಾಲಜಿಗೆ ಉತ್ತಮ ಬೇಡಿಕೆ ಇದೆ- ಅಭಿಷೇಕ್ ಟಿ. ಭಟ್;

ಪುತ್ತೂರು: ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಂಡ ಬಳಿಕ
ಸ್ನಾತಕೋತ್ತರ ಪದವಿ ಅಥವಾ ಉದ್ಯೋಗ ಎಂಬ ಎರಡು
ಮಾರ್ಗಗಳಿರುತ್ತದೆ. ನಮ್ಮ ಮುಂದಿನ ಶೈಕ್ಷಣಿಕ ಜೀವನದ
ಬಗೆಗೆ ನಮ್ಮ ಆಸಕ್ತಿಯ ವಿಚಾರಕ್ಕೆ ಪ್ರಾಶಸ್ತ್ಯವನ್ನು
ನೀಡಬೇಕು.ಸ್ನಾತಕೋತ್ತರ ಪದವಿಯಲ್ಲಿ ಅನೇಕ
ವಿಷಯಗಳ ಆಯ್ಕೆ ನಮ್ಮೆದುರಿರುತ್ತದೆ. ಪ್ರಸ್ತುತ
ಬಯೋಟೆಕ್ನೋಲಾಜಿ ಗೆ ಹೆಚ್ಚು ಬೇಡಿಕೆ ಇದೆ ಎಂದು ಲಕ್ನೋ ದ
ಸಿಎಸ್ಐಆರ್ ರಾಷ್ಟ್ರೀಯ ಸಸ್ಯ ಸಂಶೋಧನಾ ಸಂಸ್ಥೆ ಯ
ಸಂಶೋಧನಾರ್ಥಿ,ಕಾಲೇಜಿನ ಹಿರಿಯ ವಿದ್ಯಾರ್ಥಿ ಅಭಿಷೇಕ್ ಟಿ. ಭಟ್
ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)
ಸಸ್ಯಶಾಸ್ತ್ರವಿಭಾಗ,ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ
ಘಟಕದ ಸಹಯೋಗದೊಂದಿಗೆ ನಡೆದ
ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ
ಪ್ರಾಂಶುಪಾಲ ಡಾ.ಶ್ರೀಧರ ನಾಯ್ಕ್.ಬಿ ಮಾತನಾಡುತ್ತಾ,
ಭಾರತದಲ್ಲಿ ವ್ಯವಸಾಯಕ್ಕೆ ಹೆಚ್ಚಿನ
ಪ್ರಾಧನ್ಯತೆಯಿದೆ.ತಂತ್ರಜ್ಞಾನ ಮುಂದುವರೆದAತೆ ಕೃಷಿಗೆ
ಉಪಯುಕ್ತವಾದ ಅನೇಕ ಯಂತ್ರೋಪಕರಣಗಳು
ದೊರಕುತ್ತಿದೆ.ಕೊರೋನಾದ ನಂತರ ಪದವಿ ಪಡೆದ
ಅನೇಕರು ಇಂದು ಕೃಷಿ ಕ್ಷೇತ್ರದತ್ತ ಒಲವು
ತೋರುತ್ತಿದ್ದಾರೆ.ಬಿ.ಎಸ್ಸಿ ಪದವಿ ಪಡೆದುಕೊಂಡ ಅನೇಕರು
ಇಂದು ಸಂಶೋಧಕರಾಗಿ ಹೊರಹೊಮ್ಮತ್ತಿದ್ದಾರೆ ಎಂದು
ನುಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲ ಹಾಗೂ
ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕೃಷ್ಣಗಣರಾಜ ಭಟ್ ಸ್ವಾಗತಿಸಿ,
ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ ದಿವ್ಯಶ್ರೀ ವಂದಿಸಿ, ತೃತೀಯ ಬಿ.ಎಸ್ಸಿ
ವಿದ್ಯಾರ್ಥಿನಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…