News & Updates

ಯುವ ಜನತೆಯಲ್ಲಿ ಲಿಂಗ ಸೂಕ್ಷ್ಮತೆ_ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮ

ಪುತ್ತೂರು.ಮೇ,30:
ಯುವ ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವುದರ ಜೊತೆಗೆ ತಮ್ಮ ದೇಹವನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬಹುದೆಂದು ಅನೇಕ ಉದಾಹರಣೆಗಳನ್ನು ನೀಡಿ , ನಮ್ಮ ದೇಹಕ್ಕೆ ಯಾವ ರೀತಿಯ ಆಹಾರದ ಅಗತ್ಯವಿದೆ ಹಾಗೂ ಯಾವ ರೀತಿಯ ಆಹಾರವನ್ನು ಸೇವಿಸಬೇಕೆಂಬ ಸಲಹೆಯ ಜೊತೆಗೆ ದೇಹವನ್ನು ಸ್ವಚ್ಚಗೊಳಿಸದಿದ್ದರೆ ಏನೆಲ್ಲಾ ಅಪಾಯಗಳು ಸಂಭವಿಸುತ್ತದೆ ಎಂದು ಡಾ .ವಿಷ್ಣು ಕೀರ್ತಿ ಮಾಹಿತಿ ನೀಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ( ಸ್ವಾಯತ್ತ) ಮಹಾವಿದ್ಯಾಲಯ ಇಲ್ಲಿನ ಸಮಾಜಶಾಸ್ತ್ರ ವಿಭಾಗ ಮತ್ತು ಮಹಿಳಾ ಕೋಶದ ವತಿಯಿಂದ ಯುವ ಜನತೆಯಲ್ಲಿ ಲಿಂಗ ಸೂಕ್ಷ್ಮತೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಆಯೋಜಿಸಿದ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ಮಹಿಳಾ ಕೋಶದ ಸಂಯೋಜಕರಾದ ವಿದ್ಯಾ .ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಬಿಎ ವಿಭಾಗದ ವಿದ್ಯಾರ್ಥಿಗಳಾದ ಯಶಸ್ವಿನಿ ಸ್ವಾಗತಿಸಿ,ಲಿಖಿತ್ ವಂದಿಸಿ ದರು ಹಾಗೂ ಶ್ರೇಯಾ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…