News & Updates

ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿವೇಕಾನಂದದರಕ್ಷಾ ಜಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಪುತ್ತೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಜರುಗಿದ
ರಾಜ್ಯ ಮಟ್ಟದ ಜೂನಿಯರ್ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ +87
ವಿಭಾಗದಲ್ಲಿ ಭಾಗವಹಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ
ವಿದ್ಯಾರ್ಥಿನಿ ರಕ್ಷಾ.ಜಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಗೆ ಆಯ್ಕೆ
ಆಗಿದ್ದಾರೆ. ಇವರು ಜೂನ್ ತಿಂಗಳ 18 ರಿಂದ 21 ರ ವರೆಗೆ
ಮಧ್ಯಪ್ರದೇಶ ದ ಇಂಧೊರ್ ನಲ್ಲಿ ನಡೆಯಲಿರುವ ‘ಅಸ್ಮಿತಾ
ಖೇಲೊ ಇಂಡಿಯಾ’ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್
ಶಿಪ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು
ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ
ರವಿಶಂಕರ್ ಹಾಗೂ ಯತೀಶ್ ಇವರ ಮಾರ್ಗದರ್ಶನದಲ್ಲಿ ಡಾ.
ಜ್ಯೋತಿ ತರಬೇತಿ ನೀಡಿರುತ್ತಾರೆ. ಇವರ ಸಾಧನೆಗೆ ಕಾಲೇಜಿನ
ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರ
ವೃಂದದವರು ಶುಭಹಾರೈಸಿದ್ದಾರೆ. ಇವರು ಬಂಟ್ವಾಳದ ಬರಿಮಾರಿನ
ಡೀಕಯ್ಯ ಪೂಜಾರಿ ಹಾಗೂ ಎಸ್ ಲಲಿತಾ ಇವರ ಪುತ್ರಿ. ಪ್ರಸ್ತುತ
ವಿವೇಕಾನಂದ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವಿಭಾಗದಲ್ಲಿ
ವ್ಯಾಸಾಂಗ ಮಾಡುತ್ತಿದ್ದಾರೆ.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…