
ಕೃಷಿ ಉದ್ಯಮ ಪ್ರಸ್ತುತ ದಿನಗಳಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಿ ಬದುಕಲು ಅಧಿಕ ಉದ್ಯೋಗವಕಾಶಗಳಿರುವ ಕ್ಷೇತ್ರದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು.ವೃತ್ತಿ ಬದುಕಿನಲ್ಲಿ ತೃಪ್ತಿ ಹೊಂದಲು ಸ್ವಂತ ಉದ್ಯೋಗ ಸಹಕಾರಿಯಾಗಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಎಡೆಲ್ವೀಸ್ ಜೀವ ವಿಮೆಯ ವೈಯಕ್ತಿಕ ಹಣಕಾಸು ಸಲಹೆಗಾರ,ಪ್ರಗತಿಪರ ಕೃಷಿಕ ಅಭಿರಾಮ್ ಪೆರಿಯಪ್ಪು ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ ವ್ಯವಹಾರ ಆಡಳಿತ ವಿಭಾಗ, ನಿರ್ವಹಣಾ ಸಂಘ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಕೃಷಿ ಉದ್ಯಮಶೀಲತೆಯಲ್ಲಿ ಉದಯೋನ್ಮುಖ ಪ್ರವೃತ್ತಿ ಕುರಿತ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ ಮಾತನಾಡಿ, ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ಇತ್ತೀಚಿನ ದಿನಗಳಲ್ಲಿ ಕೃಷಿ ಕೇವಲ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿರದೆ, ಪ್ರವಾಸೋದ್ಯಮದ ಒಂದು ಭಾಗವಾಗಿ ಬೆಳೆದಿದೆ.ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.
ವಾಣಿಜ್ಯ ವಿಭಾಗದ ಡೀನ್ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ. ಪಿ ಮಾತನಾಡಿ,ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯ ಮೂಲಕ ತೊಡಗಿಸಿಕೊಳ್ಳುವ ಕೌಶಲ್ಯವನ್ನು ಒದಗಿಸುತ್ತದೆ.ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ಪ್ರಮಾಣ ಪತ್ರವನ್ನು ಒದಗಿಸದೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸ್ವಯಂ ಶಿಸ್ತು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುವ ಕೌಶಲ್ಯವನ್ನು ಹೇಳಿಕೊಡುತ್ತದೆ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್.ಎಸ್ ಶುಭಹಾರೈಸಿದರು.
ವೇದಿಕೆಯಲ್ಲಿ ನಿರ್ವಹಣಾ ಸಂಘದ ಸಂಯೋಜಕಿ ಅನ್ನಪೂರ್ಣ ಪಿ. ಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ನಿರ್ವಹಣಾ ಸಂಘದ ಕಾರ್ಯದರ್ಶಿ ಚೈತನ್ಯ ತೃತೀಯ ಬಿಬಿಎ ಸ್ವಾಗತಿಸಿ, ಅಧ್ಯಕ್ಷ ಪ್ರಣಮ್ ರಾಜ್ ತೃತೀಯ ಬಿಬಿಎ ವಂದಿಸಿ, ರಕ್ಷಾ ಪ್ರಭು. ಕೆ ತೃತೀಯ ಬಿಬಿಎ ನಿರ್ವಹಿಸಿದರು.
ಉಪನ್ಯಾಸಕ ಗೌತಮ್ ಪೈ. ಬಿ ಮತ್ತು ಉಪನ್ಯಾಸಕಿ ದೀಪಿಕಾ. ಎಸ್ ಸಹಕರಿಸಿದರು.
