News & Updates

ವಿವೇಕಾನಂದ ಕಾಲೇಜಿನಲ್ಲಿ ‘ನಿರ್ಮಾಣ್’ ವಸ್ತು ಪ್ರದರ್ಶನ

ಪುತ್ತೂರು, ಸೆ.3: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ರ) ಇಲ್ಲಿ ವ್ಯವಹಾರ ನಿರ್ವಹಣಾ ವಿಭಾಗ ಮತ್ತು
ಐಕ್ಯೂಎಸಿ ಘಟಕದ ಸಹಯೋಗದಲ್ಲಿ ‘ನಿರ್ಮಾಣ್’ ಉತ್ಪಾದನಾ ಪ್ರಕ್ರಿಯೆ ಮಾದರಿ
ಪ್ರದರ್ಶನವೂ ಸುವರ್ಣಮಹೋತ್ಸವ ಸಭಾಭವನದಲ್ಲ್ಲಿ ಯಶಸ್ವಿಯಾಗಿ
ಮೂಡಿಬಂದಿತು.
ವಿವೇಕಾನAದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಗಣಕ
ವಿಜ್ಞಾನ ವಿಭಾಗದ ಮುಖ್ಯಸ್ಥ, ಶ್ರೀ ದೇವಿಚರಣ್ ರೈ ಇವರು
ಕಾರ್ಯಕ್ರಮವನ್ನು ಉದ್ಘಾಟಿಸಿ 51 ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳು 13 ತಂಡಗಳಲ್ಲಿ ಸ್ಥಳೀಯ ಉದ್ಯಮಗಳಾದ ಫ್ಲೇರ‍್ಸ್
ಐಸ್ಕಿçÃಂ, ಕೋಕೋ ಗುರು, ಸ್ಪೆಷಾಲಿಟಿ ಗ್ರಾಫೈಟ್ಸ್, ಎಂ ಬಿ ಸಿ ಶಿವಾನಿ, ಸುರಕ್ಷಾ
ಇಂಟರ್‌ಲಾಕಿAಗ್ ಮಡ್ ಬ್ಲಾಕ್, ಐಡಿಯಲ್ ಕ್ಯಾಶ್ಯೂ ಸೇರಿದಂತೆ ಇನ್ನೂ ಹಲವಾರು
ಉದ್ಯಮಗಳಿಗೆ ಭೇಟಿ ನೀಡಿ ಅಲ್ಲಿನ ಉತ್ಪಾದನಾ ಪ್ರಕ್ರಿಯೆಗಳನ್ನು
ಅಧ್ಯಯನ ಮಾಡಿ ರಚಿಸಿದ ಮಾದರಿಗಳು ಪ್ರದರ್ಶನಗೊಂಡು ವೀಕ್ಷಕರ
ಮೆಚ್ಚುಗೆಗೆ ಪಾತ್ರವಾದವು.
ಈ ಕಾರ್ಯಕ್ರಮದಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ಭಾಗವಹಿಸಿ, ವಿವಿಧ ಉದ್ಯಮಗಳ ಮಾದರಿಗಳನ್ನು ವೀಕ್ಷಣೆ ಮಾಡಿ ಅವುಗಳ
ಉತ್ಪಾದನಾ ವಿಧಾನ – ಕಾರ್ಯನಿರ್ವಹಣೆಯ ಕುರಿತು ಮಾಹಿತಿಯನ್ನು
ಪಡೆದುಕೊಂಡರು.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ
ಉಪನ್ಯಾಸಕರು ಹಾಗೂ ಆಸಕ್ತ ವಿದಾರ್ಥಿಗಳು ಭಾಗವಹಿಸಿದರು.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…