ಪುತ್ತೂರು. ನ,14;. ನಮ್ಮ ಭಾಷೆಯನ್ನು ಯಾವುದೇ
ಕಾರಣಕ್ಕೂ ನಿರ್ಲಕ್ಷಿಸಬಾರದು. ತಾಂತ್ರಿಕ ಯುಗದಲ್ಲಿ ಭಾಷೆಯ
ಕುರಿತಾಗಿ ಅಸ್ಥಿರತೆ ಬಂದು ಮಕ್ಕಳ ಮನಸ್ಥಿತಿ ಹದಗೆಟ್ಟಿದೆ. ಇದರಿಂದ
ಭಾಷೆ ಮೂಲೆ ಗುಂಪಾಗುವ ಸಾಧ್ಯತೆ ಇದೆ. ನಮ್ಮ ಭಾಷೆಯ
ಮೇಲೆ ಅಭಿಮಾನದ ಜೊತೆಗೆ ಭಾಷಾ ಬಾಂಧವ್ಯವೂ ಕೂಡಾ
ಬೆಳೆಯಲಿ ಎಂದು ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ
ಪ್ರಾಂಶುಪಾಲ, ಶಿರಸಿಯ ಸಂಶೋಧನಾ ಇದರ ನಿರ್ದೇಶಕ ಡಾ. ಜಿ. ಎನ್
ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಐಕ್ಯೂಎಸಿ ಘಟಕ ಮತ್ತು
ಭಾಷಾ ವಿಭಾಗದ (ಆಂಗ್ಲ, ಕನ್ನಡ, ಹಿಂದಿ ಹಾಗೂ ಸಂಸ್ಕೃತ) ಜಂಟಿ
ಆಶ್ರಯದಲ್ಲಿ ಭಾಷಾ ಶಿಕ್ಷಣದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ
ಸಾಧ್ಯತೆಗಳು ಎಂಬ ವಿಷಯದ ಕುರಿತು ಆಯೋಜಿಸಿದ ರಾಷ್ಟೀಯ
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತಾನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣ ಭಟ್,
ಶಿಕ್ಷಣವನ್ನು ಸಮಗ್ರವಾಗಿ ನೋಡುವಾಗ ಭಾಷಾ ಶಿಕ್ಷಣ ಮತ್ತು
ಸಮಾಜ ಶಿಕ್ಷಣ ಇವೆರಡರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು
ಮೇಲ್ನೋಟಕ್ಕೆ ಕಾಣುತ್ತಿದೆ. ಭಾಷೆಯನ್ನು ಬೆಳೆಸಿ ಉಳಿಸುವ ಜವಾಬ್ದಾರಿ
ಶಿಕ್ಷಣ ಸಂಸ್ಥೆ ಮತ್ತು ನಮ್ಮೆಲ್ಲರ ಮೇಲಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ ಶ್ರೀಪತಿ
ಕಲ್ಲೂರಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಭಾಷಾ ಶಿಕ್ಷಣದ ಪ್ರಸ್ತುತ ಸ್ಥಿತಿ
ಮತ್ತು ಭವಿಷ್ಯದ ಸಾಧ್ಯತೆಗಳು ವಿಷಯದ ಕುರಿತು ಸಮಗ್ರ
ಗೋಷ್ಠಿ ನಡೆಯಿತು. ಈ ಗೋಷ್ಠಿಯನ್ನು ಮಂಗಳೂರಿನ ಕೆನರಾ
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗು ಶಿರಸಿಯ ಸಂಶೋಧನಾ
ಇದರ ನಿರ್ದೇಶಕ ಡಾ. ಜಿ. ಎನ್ ಭಟ್, ವಿವೇಕಾನಂದ ಪದವಿ ಕಾಲೇಜಿನ
ನಿವೃತ್ತ ಪ್ರಾಂಶುಪಾಲ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.
ಹೆಚ್ ಮಾಧವ ಭಟ್, ಕೇರಳದ ಕಾಸರಗೋಡಿನ ಸರ್ಕಾರಿ ಕಾಲೇಜಿನ
ಸ್ನಾತಕೋತ್ತರ ಮತ್ತು ಸಂಶೋಧನಾ ಕನ್ನಡ ವಿಭಾಗದ
ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು ಮತ್ತು ಕೇರಳದ
ಕಾಸರಗೋಡಿನ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ
ವಿಭಾಗದ ಉಪನ್ಯಾಸಕ ಡಾ.ತಾರು ಎಸ್ ಪಾವರ್ ನಡೆಸಿಕೊಟ್ಟರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿಕೃಷ್ಣ ಕೆ ಎನ್, ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್
ಮತ್ತು ಕಾರ್ಯಕ್ರಮದ ಸಂಯೋಜಕಿ ಡಾ.ವಿಜಯಸರಸ್ವತಿ ಬಿ,
ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ
ಪ್ರೊ.ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಕಲಾ ವಿಭಾಗದ ಡೀನ್ ಮತ್ತು
ಹಿಂದಿ ವಿಭಾಗದ ಮುಖ್ಯಸ್ಥೆ ಹಾಗು ಕಾರ್ಯಕ್ರಮದ ಸಂಯೋಜಕಿ
ಡಾ.ದುರ್ಗಾರತ್ನ ಸಿ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ
ಕುಮಾರಿ ಟಿ ಹಾಗೂ ಮಧುಕುಮಾರ್ ನಿರ್ವಹಿಸಿದರು ಮತ್ತು
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ್ ಎಂ.ಕೆ
ಸಹಕರಿಸಿದರು.
ಸಮಾರೋಪ ಸಮಾರಂಭ
ಕರ‍್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ
ಅತಿಥಿಯಾಗಿ ಭಾಗವಹಿಸಿದ ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ವರದರಾಜ
ಚಂದ್ರಗಿರಿ ಮಾತನಾಡಿ, ಮೊಬೈಲ್ ನ ಅತಿಯಾದ ಬಳಕೆ ಹಾಗೂ
ಆನ್ಲೆöÊನ್ ಶಿಕ್ಷಣದ ಪ್ರಭಾವದಿಂದ ಭಾಷೆಯ ಕಲಿಕೆಯ ಮೇಲೆ
ಋಣಾತ್ಮಕ ಪರಿಣಾಮ ಬೀರಿದೆ. ಇತ್ತೀಚೆಗೆ ಸಂಭಾಷಣೆಯೂ ಕೂಡಾ
ಡಿಜಿಟಲ್ ಮುಖಾಂತರವೇ ನಡೆಯುತ್ತಿರುವುದು ಇನ್ನೊಂದು
ಸೂಕ್ಷö್ಮವಾದ ವಿಚಾರ ಎಂದರು.