News & Updates

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಮತ್ತು ಬೆಂಬಲ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಜಾಗೃತಿ ಕಾರ್ಯಕ್ರಮ.ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು : ಸುಭಾಷಿನಿ. ಜೆ;

ಪುತ್ತೂರು . ಸೆ , 29:
ಹೆಣ್ಣು ಮಕ್ಕಳು ಕೆಲಸಮಾಡುತ್ತಿದ್ದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಕುಂದುಕೊರತೆ ಲೈಂಗಿಕ ಕಿರುಕುಳ ನಿಯಂತ್ರಣ ಕಾಯಿದೆಯನ್ನು 2013 ರಂದು ಜಾರಿಗೊಳಿಸಲಾಯಿತು.ಗ್ರಿವಂನ್ಸ್ ಹೆಣ್ಣು ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದಲ್ಲದೆ ಶೈಕ್ಷಣಿಕ ಸಮಸ್ಯೆ, ಪಠ್ಯಕ್ರಮಗಳ ಗೊಂದಲ ಪರಿಹಾರ, ಆಡಳಿತಾತ್ಮಕ ಸಮಸ್ಯೆ, ಪರಸ್ಪರ ಸಮಸ್ಯೆ ಹಾಗೆಯೇ ಪರೀಕ್ಷೆ ನಡೆಸಲು ತಡವಾಗುವ ಸಂದರ್ಭದಲ್ಲಿ ಈ ಕಾಯಿದೆಯು ಸಹಕಾರಿಯಾಗಿದೆ.ಈ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ನಮ್ಮ ಸಮಸ್ಯೆಗಳನ್ನು ತಮ್ಮಲ್ಲಿಯೇ ಗೌಪ್ಯವಾಗಿಟ್ಟುಕೊಂಡು ನಂತರ ಅದಕ್ಕೆ ಬೇಕಾದ ಪರಿಹಾರವನ್ನು ಒದಗಿಸುತ್ತಾರೆ ಎಂದು ವಿವೇಕಾನಂದ ಕಾನೂನು ಕಾಲೇಜಿನ ಸಹಾಯಕ ಕಾನೂನು ಉಪನ್ಯಾಸಕಿ ಸುಭಾಷಿನಿ. ಜೆ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ ಕುಂದುಕೊರತೆಗಳ ನಿವಾರಣಾ ಕೋಶ, ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿ, ಮಹಿಳಾ ಸಮಿತಿ ಮತ್ತು ಐಕ್ಯೂಎಸಿ ಜಂಟಿಯಾಗಿ ಆಯೋಜಿಸಿದ ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಮತ್ತು ಬೆಂಬಲ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ ಭಾರತದಲ್ಲಿರುವ ಹೆಣ್ಣು ಮಕ್ಕಳು ಎಂದಿಗೂ ಗುಲಾಮರಲ್ಲ ಅವರು ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಗಳ ಬಗ್ಗೆ ಧ್ವನಿ ಎತ್ತುವ ಧೈರ್ಯವನ್ನು ಶಿಕ್ಷಣದಿಂದ ಪಡೆದಿದ್ದಾರೆ. ಹೆಣ್ಣು ಮಕ್ಕಳು ಕಿಡಿಗೇಡಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಚಾಕಚಕ್ಯತೆಯನ್ನು ಹೊಂದಿರಬೇಕು ಎಂದರು.

ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ, ಮಹಿಳಾ ಘಟಕದ ಸಂಯೋಜಕಿ ಹಾಗೂ ಇಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥೆ ಸುಪ್ರಭಾ. ಎ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುಂದುಕೊರತೆಗಳ ನಿವಾರಣಾ ಕೋಶದ ಸಂಯೋಜಕಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್. ಕೆ ಸ್ವಾಗತಿಸಿ, ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿಯ ಸಂಯೋಜಕಿ ಹಾಗೂ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ. ಟಿ ವಂದಿಸಿ, ಗಣಿತ ವಿಭಾಗದ ಮುಖ್ಯಸ್ಥೆ ಸೌಮ್ಯ. ಬಿ ನಿರ್ವಹಿಸಿದರು.

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…