
ವಿದ್ಯಾರ್ಥಿಗಳಲ್ಲಿರಬೇಕು-ಪ್ರೊ.ವಿಷ್ಣು ಗಣಪತಿ ಭಟ್
ಪುತ್ತೂರು: ಹೊಸತನವನ್ನು ಕಲಿತುಕೊಳ್ಳುವುದೇ
ಸಂಶೋಧನೆ. ಸಂಶೋಧನೆ ತನ್ನದೇ ಆದ ಮಾದರಿಗಳನ್ನು
ಒಳಗೊಂಡಿದೆ. ಮಾಹಿತಿ ಸಂಗ್ರಹಣೆ ಮಾಡುವುದು ಸಂಶೋಧನಾ
ಕ್ಷೇತ್ರದಲ್ಲಿ ಅತ್ಯಮೂಲ್ಯ. ಪ್ರಶ್ನೆ ಮಾಡುವುದೇ ಸಂಶೋಧನೆ
ಆದ್ದರಿAದ ಪ್ರಶ್ನೆ ಮಾಡುವ ಕೌಶಲ್ಯವನ್ನು ವಿದ್ಯಾರ್ಥಿಗಳು
ರೂಡಿಸಿಕೊಳ್ಳಿ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ
ಪ್ರೊ.ವಿಷ್ಣು ಗಣಪತಿ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವಿವೇಕಾನಂದ ಸಂಶೋಧನಾ
ಕೇAದ್ರ ಆಯೋಜಿಸಿದ ಸಂಶೋಧನಾ ವಿಧಾನದ ಕುರಿತು
ಕಾರ್ಯಾಗಾರ ಸಂಶೋಧನಾ ವಿಧಾನಗಳ ಕುರಿತು ನಡೆದ
ಕರ್ಯಗಾರಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ,
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಕೆ.ಎಸ್
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ.ಹೆಚ್.ಜಿ ಶ್ರೀಧರ್ ,
ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ಸಂಶೋಧನಾ
ಕೇAದ್ರದ ಸಂಯೋಜಕಿ ಡಾ.ವಿಜಯ ಸರಸ್ವತಿ ಬಿ ಮತ್ತು
ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ
ಡಾ.ಕೃಷ್ಣ ಕಿಶೋರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ
ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನದ ಕುರಿತು, ಸಂಶೋಧನಾ
ಪತ್ರಿಕೆ ಬರೆಯುವ ಕೌಶಲ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಅಕ್ಷತಾ
ಕರ್ಯಕ್ರಮವನ್ನು ನಿರ್ವಹಿಸಿದರು.
