News & Updates

ವಿವೇಕಾನಂದ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಉಪನ್ಯಾಸ ವೈಫಲ್ಯವೇ ಯಶಸ್ಸಿನ ಆಧಾರ ಸ್ತಂಭ : ಪ್ರೊ ಪ್ರಶಾಂತ್ ನೀಲಾವರ;

ಪುತ್ತೂರು: ನಾಗರಿಕ ಸೇವೆಯ ಹುದ್ದೆಯನ್ನು
ಪಡೆಯುವುದರಿಂದ ಅಧಿಕಾರ ಮತ್ತು ಸಮಾಜದಲ್ಲಿ ಉತ್ತಮ
ಗೌರವ ದೊರೆಯಲು ಸಾಧ್ಯ. ಈ ಹಾದಿಯಲ್ಲಿ ಯಶಸ್ಸು
ಅನ್ನುವುದು ನಮ್ಮ ಪ್ರಯತ್ನದಲ್ಲಿರುತ್ತದೆ. ಆಗ
ಎದುರಾಗುವ ವೈಫಲ್ಯವು ಯಶಸ್ಸಿನ ಆಧಾರಸ್ತಂಭವಾಗಲಿದೆ
ಎAದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು
ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ,
ಪ್ರೊ.ಪ್ರಶಾಂತ್ ನೀಲಾವರ ಅಭಿಪ್ರಾಯಪಟ್ಟರು.
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ)ದ ರಾಜಕೀಯ ವಿಭಾಗ, ಪೊಲಿಟಿಕಲ್
ಫೋರಂ, ಮಾನವಿಕ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ
ಶನಿವಾರ ನಡೆದ &quoಣ;ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸಿನ
ತಂತ್ರಗಾರಿಕೆ&quoಣ; ಎಂಬ ಕಾರ್ಯಕ್ರಮದಲ್ಲಿ ಅವರು ವಿಶೇಷ
ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.
ಶ್ರೀಧರ್ ನಾಯ್ಕ್ ಅವರು, ಮಾನವನಿಗೆ ಸ್ಪರ್ಧಾತ್ಮಕ ಜೀವನ
ಬಹಳ ಮುಖ್ಯ. ಪೈಪೋಟಿಗಾರರು ಇದ್ದಾಗ ಮಾತ್ರ ಜೀವನದಲ್ಲಿ
ಯಶಸ್ಸು ಕಾಣಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ
ಹೊರಹೊಮ್ಮಲು ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ಗುಣ
ಮತ್ತು ನಡತೆ ಮಹತ್ವದ ಪಾತ್ರ ವಹಿಸುತ್ತದೆ. ಆದರೆ
ಶೈಕ್ಷಣಿಕದಲ್ಲಿ ಶ್ರೇಷ್ಠತೆಯನ್ನು ಪಡೆಯಬೇಕಾದರೆ
ಸ್ಪರ್ಧಾತ್ಮಕ ಪರೀಕ್ಷೆ ಪ್ರಮುಖವಾಗಿರುತ್ತದೆ ಎಂದರು.
ರಾಜಕೀಯ ವಿಭಾಗದ ವಿದ್ಯಾರ್ಥಿ ಸಂಯೋಜಕ ಮಧು. ಕೆ. ಆರ್
ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ಸ್ವಾಗತಿಸಿದರು.
ಮಾನವಿಕ ವಿಭಾಗದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ
ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ. ಎಸ್. ವಂದಿಸಿದರು. ತೃತೀಯ ಕಲಾ
ವಿಭಾಗದ ವಿದ್ಯಾರ್ಥಿ ವರುಣ್ ಕೃಷ್ಣ ನಿರೂಪಿಸಿದರು.

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…