News & Updates

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಮಾಹಿತಿ ಕಾರ್ಯಗಾರ;

ಪುತ್ತೂರು,ಜನವರಿ.22: ಸಂಶೋಧನೆಯು ಹುಡುಕಾಟಕ್ಕಿಂತ
ಭಿನ್ನವಾಗಿದೆ. ಹೇಗೆ ವಿಭಿನ್ನ ಎಂದು ನಾವು ತಿಳಿದುಕೊಳ್ಳಬೇಕು.
ಇವೆರಡರ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಸಂಶೋಧನಾ
ಗುಣ ಎಲ್ಲಾ ಮನುಷ್ಯರಲ್ಲೂ ಇರುವಂತದ್ದು. ಯಾವುದಾದರೂ
ಹೊಸ ವಿಷಯದ ಹುಡುಕಾಟವೇ ಸಂಶೋಧನೆ. ಇದು ನಮ್ಮ
ಜ್ಞಾನವನ್ನು ಹೆಚ್ಚುಗೊಳಿಸುವುದಲ್ಲದೆ ಅನೇಕ
ವಿಷಯಗಳ ಬಗೆಗೆ ತಿಳಿಸಿಕೊಡುತ್ತದೆ. ಈ ಪ್ರಕ್ರಿಯೆಯು
ದೀರ್ಘಕಾಲದ ಸಮಯವಕಾಶವನ್ನು ತೆಗೆದುಕೊಳ್ಳುತ್ತದೆ.
ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯ ಬಳಿಕದ ಜೀವನಕ್ಕೆ
ಸಂಶೋಧನಾಶೀಲ ಅಧ್ಯಯನವು ಹೆಚ್ಚು ಸಹಾಯಕವಾಗಿದೆ
ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ
ಪ್ರಾಧ್ಯಾಪಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ಪುತ್ತೂರು ಇಲ್ಲಿ ಸ್ನಾತಕೋತ್ತರ ವಿಭಾಗ
ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ
ಘಟಕದ ವತಿಯಿಂದ ನಡೆದ ಉತ್ತಮ ಸಂಶೋಧನೆಯನ್ನು
ರೂಪಿಸಲು ಸಲಹೆಗಳು ಮತ್ತು ತಂತ್ರಗಳು ಎಂಬ ವಿಶೇಷ
ಮಾಹಿತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ
ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭಾಶಯದ
ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗ ಮತ್ತು
ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.
ವಿಜಯಸರಸ್ವತಿ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಎಂ.ಕಾA ವಿದ್ಯಾರ್ಥಿ ಪವನ್‌ರಾಜ್
ಸ್ವಾಗತಿಸಿ, ರೇಖಾ ವಂದಿಸಿ, ದೀಪಶ್ರೀ ಕಾರ್ಯಕ್ರಮವನ್ನು
ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ;

ವಿವೇಕಾನಂದ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ;

ಪುತ್ತೂರು, ಜನವರಿ 26: ಪುತ್ತೂರಿನ ವಿವೇಕಾನಂದ ಕಲಾ,…

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಮಾಹಿತಿ ಕಾರ್ಯಗಾರ;

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಮಾಹಿತಿ ಕಾರ್ಯಗಾರ;

ಪುತ್ತೂರು,ಜನವರಿ.22: ಸಂಶೋಧನೆಯು ಹುಡುಕಾಟಕ್ಕಿಂತಭಿನ್ನವಾಗಿದೆ. ಹೇಗೆ ವಿಭಿನ್ನ ಎಂದು…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ…