News & Updates

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೇರಣೆ” – ಡಾ. ವಿಜಯ್ ವಿ. ಎಸ್;

ಪುತ್ತೂರು: “ಇಂದಿನ ಯುಗದಲ್ಲಿ ಶಿಕ್ಷಣ ಮಾತ್ರವಲ್ಲದೆ
ನಮ್ಮಲ್ಲಿರುವ ಕೌಶಲ್ಯಗಳು ನಮ್ಮ ಬದುಕನ್ನು
ವಿಶಿಷ್ಟಗೊಳಿಸುತ್ತದೆ. ವಿದ್ಯಾರ್ಥಿಗಳು ಇಂತಹ ಹ್ಯಾಕಥಾನ್ ಅಥವಾ
ವಿವಿಧ ರೀತಿಯ ವೃತ್ತಿ ತರಬೇತಿಯಲ್ಲಿ ಸಕ್ರಿಯವಾಗಿ
ಭಾಗವಹಿಸುವುದರಿಂದ ನೈಜ ಜಗತ್ತಿನ ಅನುಭವವನ್ನು
ಪಡೆಯುತ್ತಾರೆ. ಇಂದಿನ ದಿನಗಳಲ್ಲಿ ಸರ್ಕಾರ ಹೊಸ
ಆವಿಷ್ಕಾರಗಳನ್ನು ಉತ್ತೇಜಿಸುತ್ತಿದ್ದು ಹೊಸ ನೌಕರರಿಗೆ ಅಪಾರ
ಅವಕಾಶಗಳು ದೊರೆಯುತ್ತಿದೆ ಎಂದು ಮಂಗಳೂರಿನ ಸೈಂಟ್
ಜೋಸಫ್ ಇಂಜಿನಿಯರಿoಗ್ ಕಾಲೇಜಿನ ಉಪನ್ಯಾಸಕ ಡಾ. ವಿಜಯ್ ವಿ. ಎಸ್
ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)
ಮಹಾವಿದ್ಯಾಲಯ, ಇಲ್ಲಿನ ಗಣಕ ವಿಜ್ಞಾನ ವಿಭಾಗ ಹಾಗೂ ಐಕ್ಯೂಎಸಿ
ಮತ್ತು ಗೂಗಲ್ ಡೆವಲಪರ್ ಗ್ರೂಪ್ ನ
ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹ್ಯಾಕಥಾನ್ 2025–26
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.
ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಸಮಾಜಕ್ಕೆ
ಸಹಕಾರಿಯಾಗುವಂತಹ ಹೊಸ ಹೊಸ ಆಲೋಚನೆಗಳನ್ನು
ಅನ್ವೇಷಿಸಬೇಕು. ಇದರಿಂದಾಗಿ ದೇಶವು ತಾಂತ್ರಿಕವಾಗಿ ಬೆಳೆಯಲು
ಸಹಕಾರಿಯಾಗಬಲ್ಲುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ
ಆಲ್ಸ್ಟೋಮ್ ಸಂಸ್ಥೆಯ ಡೊಮೈನ್ ಲೀಡ್ – ಕಾಗ್ನಿಟಿವ್ ಸರ್ಚ್
ಪ್ಲಾಟ್‌ಫಾರ್ಮ್ ನ ಅಜಯ್ ವೈಲಾಯ ವಿದ್ಯಾರ್ಥಿಗಳಿಗೆ
ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್,
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ.
ಮತ್ತು ಗೂಗಲ್ ಡೆವಲಪರ್ ಗ್ರೂಪ್ ನ ಸಂಯೋಜಕಿ
ಹೇಮಶುಭಾಶಿನಿ ಉಪಸ್ಥಿತರಿದ್ದರು.

ಗೂಗಲ್ ಡೆವಲಪರ್ ಗ್ರೂಪ್ ನ ವಿದ್ಯಾರ್ಥಿ ಸಂಯೋಜಕ ಸಚಿನ್
ಉಪ್ಪರ್ಣ ಕಾರ್ಯಕ್ರಮದ ಸಂಯೋಜನೆಯಲ್ಲಿ ಪ್ರಮುಖ
ಪಾತ್ರ ವಹಿಸಿದರು. ಕಾರ್ಯಕ್ರಮವನ್ನು ತೃತೀಯ ವರ್ಷದ
ಬಿಸಿಎ ವಿದ್ಯಾರ್ಥಿ ಸುಶಾಂತ್ ರೈ ಸ್ವಾಗತಿಸಿ, ದಿವ್ಯ ಕೆ.ಎ
ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…