News & Updates

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್;

ಭಾಷಾ ಕೌಶಲ್ಯಗಳ ಐದು ದಿನಗಳ ಕಾರ್ಯಗಾರ ಉದ್ಘಾಟನೆ

ಪು. ಜ. 19: ಮನುಷ್ಯನ ಆಲೋಚನೆಗಳನ್ನು ಇತರರಿಗೆ
ಅರ್ಥೈಸುವುದಕ್ಕೆ ಸಂವಹನ ಹಾಗೂ ಭಾಷೆ ಅಗತ್ಯವಾಗಿದೆ.
ಉತ್ತಮ ಯೋಜನೆಗಳನ್ನು ಹೇಗೆ ತಿಳಿಸುತ್ತೇವೆ
ಅನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ.
ವೃತ್ತಿಜೀವನದ ಯಶಸ್ಸಿಗೆ ಸಂವಹನವೇ ಮೂಲ ಎಂದು
ವಿವೇಕಾನoದ ಕಾಲೇಜಿನ ಪ್ರಾಚಾರ್ಯ ಪ್ರೊ. ಶ್ರೀಕೃಷ್ಣ ಗಣರಾಜ
ಭಟ್ ಹೇಳಿದರು.

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
(ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ, ಪದವಿ
ಇಂಗ್ಲಿಷ್ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ
ನಡೆಯಲಿರುವ 5 ದಿನಗಳ ಸಾಮರ್ಥ್ಯ ವರ್ಧನೆ
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷಾಬಳಕೆಯಿಂದ ಸಂವಹನದ ಗುಣಮಟ್ಟ ಹೆಚ್ಚಳವಾಗುತ್ತದೆ.
ವ್ಯಾಕರಣದ ಬಳಕೆ, ಪದಗಳ ಜ್ಞಾನ ಸಂವಹನಕಾರನಿಗೆ ಗರಿಮೆ
ನೀಡುತ್ತದೆ. ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲಿ
ಸಂವಹನವೇ ಧೈರ್ಯ ತುಂಬುತ್ತದೆ ಎಂದರು.
ಕಲಾ ವಿಭಾಗದ ಡೀನ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ
ಎಚ್. ಮಾತನಾಡಿ, ಕಾಲೇಜುಗಳಲ್ಲಿ ನಡೆಯುವ
ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ
ತೊಡಗಿಸಿಕೊಳ್ಳಬೇಕು. ನಿಷ್ಠರಾಗಿ ಚಟುವಟಿಕೆಗಳಲ್ಲಿ
ತಮ್ಮನ್ನು ತಾವು ತೊಡಗಿಸಿದಲ್ಲಿ, ಉನ್ನತ ವ್ಯಕ್ತಿತ್ವವನ್ನು
ರೂಪಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಸ್ನಾತಕೋತ್ತರ ವಾಣಿಜ್ಯ
ವಿಭಾಗದ ವಿದ್ಯಾರ್ಥಿ ರಜತ್ ಸ್ವಾಗತಿಸಿ, ಸ್ನಾತಕೋತ್ತರ ಅಧ್ಯಯನ
ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ಬಿ.
ಪ್ರಸ್ತಾವನೆಗೈದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ
ವಿದ್ಯಾರ್ಥಿ ಪವನ್ ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ;

ವಿವೇಕಾನಂದ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ;

ಪುತ್ತೂರು, ಜನವರಿ 26: ಪುತ್ತೂರಿನ ವಿವೇಕಾನಂದ ಕಲಾ,…

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಮಾಹಿತಿ ಕಾರ್ಯಗಾರ;

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಮಾಹಿತಿ ಕಾರ್ಯಗಾರ;

ಪುತ್ತೂರು,ಜನವರಿ.22: ಸಂಶೋಧನೆಯು ಹುಡುಕಾಟಕ್ಕಿಂತಭಿನ್ನವಾಗಿದೆ. ಹೇಗೆ ವಿಭಿನ್ನ ಎಂದು…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ…