News & Updates

ವೃತ್ತಿ ಗೌರವ ಎಂಬುದು ನಮ್ಮ ರಕ್ತಗತವಾಗಿ ಬೆರೆತು ಹೋಗಬೇಕು:ಡಾ. ಮನಮೋಹನ ಎಂ

ಪುತ್ತೂರು.ಎ.05 :
ಒಬ್ಬ ವ್ಯಕ್ತಿ ಜೀವನದಲ್ಲಿ ಅಧಿಕಾರಕ್ಕಿಂತ ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜಗತ್ತಿನಲ್ಲಿ ಅಧಿಕಾರದಿಂದ ಯಾರು ಯಾರನ್ನು ಗೆಲ್ಲಲು ಸಾಧ್ಯವಿಲ್ಲ.ಪ್ರತಿಯೊಬ್ಬರ ವೃತ್ತಿಗೆ ಗೌರವವನ್ನು ನೀಡಬೇಕು. ಸೇವಾ ಮನೋಭಾವ ಎಂಬುದನ್ನು ವಿದ್ಯಾರ್ಥಿ ಜೀವನದಿಂದಲೇ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಕೆಲಸದಲ್ಲೂ ಶಿಸ್ತುಬದ್ಧತಾ ಕ್ರಮ,ರೂಢಿಸಿಕೊಳ್ಳಬೇಕು ಮಾತ್ರವಲ್ಲದೆ, ಪ್ರತಿಯೊಂದು ವ್ಯಕ್ತಿಯನ್ನು ಹಾಗೂ ಅವರ ವೃತ್ತಿಯನ್ನು ಗೌರವದಿಂದ ಕಾಣಬೇಕು, ನಮ್ಮ ಜೊತೆಗಿದ್ದವರಿಗೆ ಪ್ರೀತಿ, ಗೌರವವನ್ನು ಹಂಚಬೇಕು ಎಂದು ವಿವೇಕಾನಂದ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಹೇಳಿದರು
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) , ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ “ವೃತ್ತಿ ಗೌರವ” ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ ವಿವೇಕಾನಂದ ಮಹಾವಿದ್ಯಾಲಯದ ಕಾವಲುಗಾರ ಸುಧಾಕರ ಆಚಾರ್ಯ ನಮ್ಮ ಜೀವನದಲ್ಲಿ ನಮಗೆ ಪ್ರೀತಿಗಿಂತ ದೊಡ್ಡ ವಸ್ತು ಯಾವುದು ಇಲ್ಲ. ನಾವು ಇತರರಿಗೆ ಒಳ್ಳೆಯದನ್ನು ಬಯಸಿದರೆ ನಮಗೂ ಒಳ್ಳೆಯದೇ ಆಗುತ್ತದೆ. ನಾನು ಇಲ್ಲಿನ ಪ್ರತಿಯೊಬ್ಬ ಮಕ್ಕಳನ್ನು ನನ್ನ ಮಕ್ಕಳಂತೆ ಕಾಣುತ್ತೇನೆ.ಇಲ್ಲಿನ ಮಕ್ಕಳಾಗಿರಬಹುದು, ಶಿಕ್ಷಕರಾಗಿರಬಹುದು, ಎಲ್ಲರೂ ಕೂಡ ನನ್ನನ್ನು ಪ್ರೀತಿಯಿಂದ ಗೌರವಿಸಿ, ಮಾತನಾಡಿಸುತ್ತಾರೆ. ಇಂದಿಗೂ ಯಾರೂ ಕೂಡ ನನ್ನನ್ನು ನೋಯಿಸಲಿಲ್ಲ. ನಾನು ನೀಡಿದ ಪ್ರೀತಿಗಿಂತ ಮಕ್ಕಳು ನನಗೆ ನೀಡಿದ ಪ್ರೀತಿಯೇ ಹೆಚ್ಚು ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕರಾದ ಮೈತ್ರಿ ಆರ್. ಮತ್ತು ವರ್ಷಿತ್ ಕೆ. ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾದ ತೇಜಸ್ವಿನಿ ಕೆ ಎಸ್. ಸ್ವಾಗತಿಸಿ, ಸಾನ್ವಿ ವಂದಿಸಿ, ಜೋಸ್ಟಲ್ ಮನೀಷಾ ಮಸ್ಕರೇನಸ್ ನಿರ್ವಹಿಸಿದರು

Related News

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಪುತ್ತೂರು. ಅ, 22:*ಮಾನವನ ದೇಹದಲ್ಲಿ 5 ಲೀಟರ್ನಷ್ಟು…

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ ನುಡಿನಮನ.

ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ…

ದಿ.ಭಾಸ್ಕರ ಬಿ ಅವರ ಸಮರ್ಪಣಾ ಮನೋಭಾವನಮಗೆಲ್ಲ ಮಾದರಿ:ಡಾ.ಪ್ರಭಾಕರ್…

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ: ನರಸಿಂಹ ಪ್ರಭು.

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂಮೂಡಬೇಕು.…