News & Updates

ಸಂಸ್ಥೆಗಳ ಒಡಂಬಡಿಕೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆಮುನ್ನುಡಿಯಾಗಲಿ ” :-ಡಾ ಜೆ ದಿನಕರ ಅಡಿಗ

ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಸಂಸ್ಥೆಗಳೊAದಿಗೆ ಒಡಂಬಡಿಕೆ
ಪುತ್ತೂರು,ಜೂ 12:- ಶಿಕ್ಷಣವೆಂಬುದು ಸಂಶೋಧನಾ
ಮನೋಭಾವವನ್ನು ತೆರೆದಿರಿಸುತ್ತದೆ. ಶಿಕ್ಷಣದ ಮೂಲಕ
ಸಂಶೋಧನೆಗೆ ಅಡಿಯಿಡುವುದರಿಂದ ಅದು ಮುಂದಿನ ದಿನಗಳಲ್ಲಿ
ದೇಶದ ಅಭಿವೃದ್ಧಿಗೆ ನಾಂದಿ ಹಾಡುವಂತಾಗುತ್ತದೆ. ಕಲೆ,ವಿಜ್ಞಾನ,
ವಾಣಿಜ್ಯ ಕ್ಷೇತ್ರ ಒಂದನ್ನೊAದು ಅವಲಂಭಿತವಾಗಿರುವುದು
ಗಮನಿಸಬೇಕಾದ ವಿಚಾರ. ಅಂತೆಯೇ ಇಂದು ಸಂಶೋಧನೆಯಿAದಾಗಿ
ಹಲವಾರು ಬದಲಾವಣೆಗಳನ್ನು ನಾವು ಕಾಣಬಹುದು. ಇದಕ್ಕೆ
ಹಲವಾರು ನಿದರ್ಶನಗಳಿವೆ. ಸಂಶೋಧನಾ ಕ್ಷೇತ್ರದಲ್ಲಿ ಯಾರು
ಜ್ಞಾನವನ್ನು ಪಡೆಯುತ್ತಾರೋ ಅವರಿಗೆ ಖಂಡಿತವಾಗಿಯು ಉಜ್ವಲ
ಭವಿಷ್ಯವಿದೆ. ಅದರೊಂದಿಗೆ ಕಲೆ,ಕ್ರೀಡೆ ವಿಜ್ಞಾನ, ವಾಣಿಜ್ಯ ಎಲ್ಲಾ
ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿ
ಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳ
ಸಂಸ್ಥೆಗಳ ಒಡಂಬಡಿಕೆಯಿAದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕೆ
ಮುನ್ನುಡಿ ಬರೆಯುವಂತಾಗಲಿ ಎಂದು ಗೇರು ಸಂಶೋಧನಾ
ಕೇAದ್ರದ ನಿರ್ದೇಶಕ ಡಾ .ಜೆ ದಿನಕರ ಅಡಿಗ ಹೇಳಿದರು.
ಇವರು ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ, ಮಹಾವಿದ್ಯಾಲಯ
(ಸ್ವಾಯತ್ತ)ದಲ್ಲಿ ನಡೆದ ವಿವಿಧ ಸಂಸ್ಥೆಗಳ ಒಡಂಬಡಿಕೆಯ
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮz ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ
ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ್
ಭಟ್ ಕಲ್ಲಡ್ಕ, “ಸಹಕಾರದಿಂದ ಬದುಕು ಹಾಗೂ ವೈವಿಧ್ಯತೆ ಯಲ್ಲಿ
ಏಕತೆ ಎಂಬುದು ನಮ್ಮ ಭಾರತದ ಮೂಲ ಮಂತ್ರ. ವಿವಿಧ
ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ನಮ್ಮ ದೇಶ
ಇನ್ನಷ್ಟು ಉನ್ನತ ಹಂತವನ್ನು ತಲುಪಬೇಕಾದರೆ ಈ ರೀತಿ ವಿವಿಧ
ಸಂಸ್ಥೆಗಳು ಒಂದಾಗಿ ಮುಂದುವರಿಯಲಿ ” ಎಂದು ನುಡಿದರು.
ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜೆ ದಿನಕರ
ಅಡಿಗ, ದಿ ವೆಬ್ ಪೀಪಲ್ ಪುತ್ತೂರು ಇದರ ಸಿಇಒ ಶರತ್ ಶ್ರೀನಿವಾಸ್ ,
ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್ ಮಂಗಳೂರು
ಇಲ್ಲಿಯ ಪ್ರೊ. ಡಾ ವೀಣಾ ಸಂತೋಷ್ ರೈ , ವಾರಣಾಶಿ ಡೆವಲಪ್ಮೆಂಟ್

ರಿಸರ್ಚ್ ಫೌಂಡೇಶನ್ ನ ಟ್ರಸ್ಟಿ ಡಾ. ವಾರಣಾಶಿ ಕೃಷ್ಣ ಮೂರ್ತಿ, ಸರಸ್ವತಿ
ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಇದರ ಅಧ್ಯಕ್ಷ ಸತೀಶ್ ಚಂದ್ರ
ಹಾಗೂ ಸಿಇಒ ವಸಂತ್ ನಾಯಕ್ , ಇಕೋ ಬ್ಲಿಸ್ ಬಂಟ್ವಾಳ ಇದರ
ನಿರ್ದೇಶಕ ರಾಜರಾಮ್, ಸುನಾದ ಸಂಗೀತ ಕಲಾ ಶಾಲೆ ಪುತ್ತೂರಿನ
ನಿರ್ದೇಶಕ ವಿದ್ವಾನ್ ಕಾಂಚಣ ಈಶ್ವರ್ ಭಟ್, ಶ್ರೀ ಮೂಕಾಂಬಿಕಾ
ಕಲ್ಚರಲ್ ಅಕಾಡಮಿ ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ಹಾಗೂ
ವಿದುಷಿ ಪ್ರೀತಿಕಲಾ, ಗಾನ ನೃತ್ಯ ಅಕಾಡಮಿ ಮಂಗಳೂರಿನ ವಿದುಷಿ
ವಿದ್ಯಾ ಶ್ರೀ ರಾಧಾ ಕೃಷ್ಣ, ನೃತ್ಯೋಪಾಸನಾ ಕಲಾ ಅಕಾಡಮಿ
ನೆಲ್ಲಿಕಟ್ಟೆ ಪುತ್ತೂರಿನ ವಿದುಷಿ ಶಾಲಿನಿ ಆತ್ಮಭೂಷಣ್,ಶ್ರೀ ಶಾರದಾ
ಕಲಾ ಕೇಂದ್ರ ಟ್ರಸ್ಟ್ (ಖ) ದರ್ಬೆ ಪುತ್ತೂರಿನ ವಿದ್ವಾನ್ ಸುದರ್ಶನ್
ಭಟ್ ಎಂ ಎಲ್, ಸರ್ವಜ್ಞ ಇನ್ಫೋಟೆಕ್ ಎಲ್.ಎಲ್ ಪಿ ಪುತ್ತೂರಿನ
ಆಡಳಿತಾಧಿಕಾರಿ ಶ್ರೀನಿಧಿ ರವಿಶಂಕರ್ ,ಶ್ರೀ ಧರ್ಮಸ್ಥಳ
ಮಂಜುನಾಥೇಶ್ವರ ಕಾಲೇಜಿನ ದೈಹಿಕ ನಿರ್ದೇಶಕ ರಮೇಶ್ ಹೆಚ್,
ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕಾಲೇಜಿನ ಪ್ರಾಧ್ಯಾಪಕ
ಪ್ರೊ.ಶಿವ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ ನ
ಅಧ್ಯಕ್ಷ ರಮೇಶ್ ಕೋಟೆ, ಎಸ್ ಡಿ ಎಂ ಕಾಲೇಜು ಮೈಸೂರು ಇಲ್ಲಿಯ
ಪ್ರಾಧ್ಯಾಪಕ ಡಾ.ಬಿ ವೆಂಕಟ್ ರಾಜ್, ಇವರನ್ನು ಸನ್ಮಾನಿಸಿ ಪರಸ್ಪರ
ಕಡತಗಳನ್ನು ಹಸ್ತಾಂತರಿಸಿಕೊAಡು ಒಡಂಬಡಿಕೆ ಮಾಡಿ
ಕೊಳ್ಳಲಾಯಿತು .
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಡಾ ಮುರಳಿ ಕೃಷ್ಣ ಕೆ
.ಎನ್ ಶುಭಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ
ಕಲ್ಲೂರಾಯ ಸ್ವಾಗತಿಸಿ, ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್
ವಂದಿಸಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಹಾಗೂ
ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ರೇಖಾ ಪಿ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…