News & Updates

ಮಂಗಳೂರು ವಿವಿ ಫಲಿತಾಂಶ ಪ್ರಕಟ,ವಿವೇಕಾನಂದ ಕಾಲೇಜಿನ ಸುಲಕ್ಷಣಾ ಶರ್ಮಾ ಹತ್ತನೇ ರಾಂಕ್.

ಪುತ್ತೂರು ಜೂ.14: ಮಂಗಳೂರು ವಿಶ್ವವಿದ್ಯಾನಿಲಯದ 2022-23 ಸಾಲಿನ
ಅಂತಿಮ ಪದವಿ ಪರೀಕ್ಷೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿ
ಸುಲಕ್ಷಣಾ ಶರ್ಮಾ ಹತ್ತನೇ ರಾಂಕ್ ಗಳಿಸಿದ್ದಾರೆ.
ಮೂಲತಃ ಕಾಸರಗೋಡಿನ ಕಾನಕ್ಕೊಡು ನಿವಾಸಿಗಳಾದ ವಿಷ್ಣು ಶರ್ಮಾ
ಮತ್ತು ಸಂಧ್ಯಾ ಇವರ ಸುಪುತ್ರಿಯಾದ ಸುಲಕ್ಷಣಾ ಶರ್ಮಾ ಬಿ.ಎ.ಯಲ್ಲಿ
ಇತಿಹಾಸ, ಅರ್ಥಶಾಸ್ತç ಮತ್ತು ರಾಜ್ಯಶಾಸ್ತç ವಿಷಯಗಳನ್ನು ಆಯ್ಕೆ
ಮಾಡಿಕೊಂಡಿದ್ದರು. ಪ್ರಸ್ತುತ ವಿವೇಕಾನಂದ ಮಹಾವಿದ್ಯಾಲಯದ
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪಠೆ್ಯÃತರ ಚಟುವಟಿಕೆಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ
ಗುರುತಿಸಿಕೊಂಡಿರುವ ಇವರು ವಿವೇಕಾನಂದ ಸಂಸ್ಥೆ ನಡೆಸುವ ಐಎಎಸ್
ತರಬೇತಿ ನೀಡುವ ಯಶಸ್ ಕೇಂದ್ರದ ವಿದ್ಯಾರ್ಥಿನಿಯೂ ಆಗಿದ್ದಾರೆ.
ಇವರಿಗೆ ವಿವೇಕಾನಂದ (ಸ್ವಾಯತ್ತ) ಮಹಾವಿದ್ಯಾಲಯದ ಆಡಳಿತ ಮಂಡಳಿಯ
ಅದ್ಯಕ್ಷರು, ಸಂಚಾಲಕರು, ಸರ್ವ ಸದಸ್ಯರು, ಪ್ರಾಂಶುಪಾಲರು,
ನಿರ್ದೇಶಕರು, ಡೀನ್, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು
ಸಮೂಹ ಸಂವಹನ ವಿಭಾಗ, ಕಲಾ ವಿಭಾಗ ಮತ್ತು ವಿದ್ಯಾರ್ಥಿಗಳು
ಶುಭಕೋರಿದ್ದಾರೆ.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…