News & Updates

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಪ್ರಸಾರಾಂಗದ ಉದ್ಘಾಟನೆ ಮತ್ತು ಪುನರ್ವಸು ಕೃತಿ ಬಿಡುಗಡೆ-30-8-2024

ದಿನಾಂಕ: 29-8-2024
ಸ್ಥಳ: ಪುತ್ತೂರು
ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಮತ್ತು
ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಇದರ
ಸಹಯೋಗದಲ್ಲಿ ಇಂದು ಪ್ರಸಾರಾಂಗದ ಉದ್ಘಾಟನೆ ಮತ್ತು
ಪುನರ್ವಸು ಕೃತಿಯ ಲೋಕಾರ್ಪಣೆ ಕರ‍್ಯಕ್ರಮ
ನಡೆಯಲಿದೆ.
ಪ್ರಸಾರಾಂಗದ ಉದ್ಘಾಟನೆ:
ವಿವೇಕಾನಂದ ಕಾಲೇಜು 2022 ರಲ್ಲಿ ಸ್ವಾಯತ್ತ
ಮಾನ್ಯತೆಯನ್ನು ಪಡೆದುಕೊಂಡ ಬಳಿಕ
ಪ್ರಸಾರಾಂಗವೊAದನ್ನು ಆರಂಭಿಸಬೇಕು ಎಂಬ
ಅಲೋಚನೆ ಹಿರಿಯರ ಮನಸ್ಸಿನಲ್ಲಿತ್ತು. ಶಿಕ್ಷಣ ಸಂಸ್ಥೆ
ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಜ್ಞಾನ ಪ್ರಸಾರದ
ಕೇಂದ್ರವು ಆಗಬೇಕು, ಭಾರತೀಯ ಸಂಸ್ಕೃತಿ ಜ್ಞಾನ
ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿ
ತಿಳಿಸಬೇಕು ಎಂಬ ಉದ್ದೇಶ ಪ್ರಸಾರಾಂಗವನ್ನು
ಆರAಭಿಸುವುದರ ಹಿಂದಿನ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ
ಆರಂಭ ವಾಗುತ್ತಿರುವ ಪ್ರಸಾರಾಂಗದ ಬಗ್ಗೆ ಮೊದಲ
ಪ್ರಕಟಣೆಯಾಗಿ ಪುನರ್ವಸು ಕೃತಿ ಹೊರಬರಲಿದೆ.
ಇದರಿಂದಾಗಿ ಪ್ರಸಾರಾಂಗಕ್ಕೆ ದೈವಿಕ ಚೌಕಟ್ಟು ಒಂದು
ಲಭ್ಯವಾಗಿದೆ ಎನ್ನಬಹುದು. ಪುನರ್ವಸು ಶ್ರೀರಾಮನ ಜನ್ಮ

ನಕ್ಷತ್ರವೂ ಹೌದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ
ಅಗತ್ಯವಿರುವ ಪಠ್ಯ ಪುಸ್ತಕ, ವಿವಿಧ ವಿಭಾಗಗಳು
ಪ್ರಕಟಿಸುವ ಶೈಕ್ಷಣಿಕ ಹಾಗೂ ಸಾಹಿತ್ಯಿಕ
ಕೃತಿಗಳನ್ನು ಪ್ರಸಾರಾಂಗದ ಮೂಲಕ ಪ್ರಕಟಿಸುವ
ಅಪೇಕ್ಷೆ ಇದೆ. ಸಂಸ್ಥೆಯ ಒಳಗಿನ ಮತ್ತು ಹೊರಗಿನ
ಬರಹಗಾಗರರ ಮೌಲಿಕ ಕೃತಿಗಳನ್ನು
ಪ್ರಕಟಿಸುವುದರ ಮೂಲಕ ಜ್ಞಾನವನ್ನು ಪಸರಿಸುವ
ಕಾಯಕದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ
ಪ್ರಸಾರಾಂಗವನ್ನು ಆರಂಭಿಸುವುದರ ಹಿಂದಿನ
ಉದ್ದೇಶವಾಗಿದೆ.
ಪುನರ್ವಸು ಕೃತಿಯ ಬಗೆಗೆ:
2021 -1-2024 ರಂದು ಭಾರತದ ಚರಿತ್ರೆಯನ್ನು
ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. À.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯನ್ನು
ಭಾರತದ ಪ್ರಧಾನಿ ಸನ್ಮಾನ್ಯ ನರೇಂದ್ರ
ಮೋದಿಯವರು ಲೋಕಾರ್ಪಣೆ ಮಾಡುವುದರೊಂದಿಗೆ
ಶತಮಾನಗಳ ನಿರೀಕ್ಷೆ ಫಲಿಸಿದ ದಿನ. ಪುನರ್ವಸು
ಕೃತಿಯಲ್ಲಿ ಅಯೋಧ್ಯಾ ಹೋರಾಟಕ್ಕೆ ಸಂಬAಧಿಸಿ
ಡಾ.ಕೆ,ಪ್ರಭಾಕರ ಭಟ್ ಕಲ್ಲಡ್ಕ, ನಾ.ಸೀತಾರಾಮ
ಜಯಶ್ಯಾಮ , ಉರಿಮಜಲು ಮೋಹನ, ದು.ಗು ಲಕ್ಷö್ಮಣ ಇವರ
ಲೇಖನಗಳಿವೆ. ಇದರೊಂದಿಗೆ ಅಯೋಧ್ಯೆಯ ಪೌರಾಣಿಕ
ಹಿನ್ನೆಲೆ, ಇತಿಹಾಸದ ಹಿನ್ನೋಟ, ಬಿಡುಗಡೆಯ ಕಥನ,
ಅಯೋಧ್ಯೆಗೆ ಸಂಬAಧಿಸಿದ ಕಾನೂನು ಹೋರಾಟ,
ರಾಮಾಯಣಕ್ಕೆ ಸಂಬAಧಿಸಿ ಬಂದಿರುವ ಯಕ್ಷಗಾನ
ಪ್ರಸಂಗಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ
ಬಂದಿರುವ ರಾಮಾಯಣ ಕೃತಿಗಳು, ಪುತ್ತೂರಿನ
ಪರಿಸರದಲ್ಲಿ ಕಂಡುಬರುವ ರಾಮಾಯಣ ಸಂಬAಧಿ
ಉಲ್ಲೇಖಗಳು, ಶ್ರೀರಾಮನ ಭಜನಾ ಮಂದಿರಗಳು,
ಆAಜನೇಯನ ವಿಗ್ರಹಗಳು, ರಾಮಾಯಣದಲ್ಲಿ

ಉಲ್ಲೇಖವಿರುವ ಸಸ್ಯಗಳು ಹೀಗೆ ಹತ್ತು ಹಲವು
ಸಂಗತಿಗಳು ಇಲ್ಲಿ ಒಂದೆಡೆ ದೊರೆಯುತ್ತದೆ. ಒಟ್ಟಿನಲ್ಲಿ
ಪುನರ್ವಸು ಕೃತಿ ರಾಮಾಯಣಕ್ಕೆ ಸಂಬAಧಿಸಿ ಹಲವು
ವಿಚಾರಗಳನ್ನು ಒಳಗೊಂಡ ಉತ್ತಮ ಕೃತಿ ಎಂಬಲ್ಲಿ
ಸAಶಯವಿಲ್ಲ. ಆದ್ದರಿಂದ ದಿನಾಂಕ 30-8-2024
ರಂದು ಪೂರ್ವಾಹ್ನ 11 ಗಂಟೆಗೆ ಕಾಲೇಜಿನ ಸುವರ್ಣ
ಮಹೋತ್ಸವ ಸಭಾಭವನದಲ್ಲಿ ಕರ‍್ಯಕ್ರಮ
ನಡೆಯಲಿದೆ. ಕರ‍್ಯಕ್ರಮದ ಅಧ್ಯಕ್ಷತೆ ಹಾಗೂ
ಪ್ರಸಾರಾಂಗದ ಉದ್ಘಾಟನೆಯನ್ನು ವಿವೇಕಾನಂದ
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್
ಕಲ್ಲಡ್ಕ ವಹಿಸಲಿದ್ದು, ‘ಪುನರ್ವಸು’ ಕೃತಿಯನ್ನು
ವಿಶ್ರಾಂತ ಪ್ರಾದ್ಯಾಪಕರು ವಿದ್ವಾನ್ ಉಮಾಕಾಂತ್ ಭಟ್
ಕೆರೆಕೈ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ
ಪ್ರೊ.ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ
ಮುರಳಿಕೃಷ್ಣ ಕೆ.ಎನ್ ಭಾಗವಹಿಸಲಿದ್ದಾರೆ.
ನಂತರ ಅಪರಾಹ್ನ 2 ಗಂಟೆಗೆ ವಿವೇಕಾನಂದ
ಸAಶೋಧನ ಕೇಂದ್ರ, ಯಕ್ಷರಂಜಿನಿ ಹಾಗೂ ದೇರಾಜೆ
ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರದ
ಸಹಯೋಗದೊAದಿಗೆ ಯಕ್ಷಗಾನ ತಾಳಮದ್ದಳೆ
‘ವಾಲಿಮೋಕ್ಷ’ ನಡೆಯಲಿದೆ. ಹಿಮ್ಮೇಳದಲ್ಲಿ ದಿನೇಶ್
ಅಮ್ಮಣ್ಣಾಯ ಚಂಡೆಯಲ್ಲಿ ಪದ್ಯಾಣ ಶಂಕರನಾರಾಯಣ
ಭಟ್, ಮದ್ದಳೆಯಲ್ಲಿ ಪಿ.ಟಿ ಜಯರಾಮ ಪದ್ಯಾಣ
ಸಹಕರಿಸಲಿದ್ದು, ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ ಬಟ್
ಕೆರೆಕೈ, ಅಶೋಕ ಭಟ್ ಉಜಿರೆ, ನಾ ಕಾರಂತ ಪೆರಾಜೆ
ಹಾಗೂ ವಿದ್ವಾನ್ ಕೇಶವ ಭಟ್ ಕೇಕಣಾಜೆ
ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಕಾಲೇಜಿನ
ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ತಿಳಿಸಿದ್ದಾರೆ.

Related News

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸಿದಂತೆ : ಡಾಧನಂಜಯ ಕುಂಬ್ಳೆ

ವಿವೇಕಾನಂದರನ್ನು ನೆನೆದರೆ ಗುರು ಪರಂಪರೆಗೆ ಕೃತಜ್ಞತೆ…

ಪುತ್ತೂರು, ಸೆ12: ವಿವೇಕಾನಂದರು ಒಬ್ಬ ಉತ್ತಮ ಕವಿ,…

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ ಶ್ರೀಗಣೇಶೋತ್ಸವ.ಮಣ್ಣು ಸೃಷ್ಟಿಯ ಕೊಡುಗೆ: ಡಾ. ಎಚ್. ಎನ್.ಉದಯಶಂಕರ

ವಿವೇಕಾನಂದ ಕಾಲೇಜಿನಲ್ಲಿ 43 ನೇ ವರ್ಷದ…

ಪುತ್ತೂರು.ಸೆ, 9:ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ…

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು 43 ನೇ ವರ್ಷದ ಗಣೇಶೋತ್ಸವ ಆಚರಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ)ನೆಹರೂ ನಗರ, ಪುತ್ತೂರು…

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರು(ರಿ) ಇದರ…