News & Updates

ಅಧ್ಯಯನದ ವಿಧಾನ ಸಿದ್ಧಾಂತದ ಸಷ್ಟೀಕರಣಕ್ಕೆ ಮೂಲ: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು ಸೆ. 25: ವಿದ್ಯಾರ್ಥಿಗಳು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ಬದುಕನ್ನು ರೂಪಿಸಲು ಹಪಹಪಿಸುತ್ತಿರುತ್ತಾರೆ. ಗುರಿ ಇಲ್ಲದೆ ದಾರಿ ಸವೆಸುವುದರ ಬದಲು, ಗುರಿಯತ್ತ ಗಮನವಿಟ್ಟು ನಿರ್ಧಾರಗಳನ್ನು ಕೈಗೆತ್ತಿಕೊಳ್ಳಬೇಕು. ಕೇಳುವ ಓದುವ ವಿಧಾನವನ್ನು ಸ್ಪಷ್ಟೀಕರಿಸಿದ್ಸÀÆ್ಟ ಸಿದ್ಧಾಂತಗಳು ರೂಪುಗುಳ್ಳುತ್ತದೆ. ಮಾಡುವ ಕಾರ್ಯವನ್ನು ಕೌಶಲ್ಯಾತ್ಮಕವಾಗಿ, ಶ್ರಮವಿಲ್ಲದೆ ಮಾಡಿದಾಗ, ದೊರಕುವ ಫಲವು ವಿಭಿನ್ನವಾಗಿರುತ್ತದೆ ಮತ್ತು ಯಶಸ್ಸನ್ನು ನೀಡುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.

ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ(ಸ್ವಾಯತ್ತ) ಬೈಂದೂರು ಪ್ರಭಾಕರ್ ರಾವ್ ಸಭಾಭವನದಲ್ಲಿ ಪ್ರಥಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನವನ್ನು ಪಡೆಯುವುದು ಒಂದು ವಿಧಾನವಾದರೆ. ಜ್ಞಾನವನ್ನು ಹೊಂದಿಸುವುದು ಮತ್ತೊಂದು ವಿಧ. ತರಗತಿ ಕೋಣೆಯಲ್ಲಿ ಕಲಿಯುವುದರ ಜೊತೆಗೆ ಸಮಾಜಕ್ಕೆ ಕಿವಿಯಾಗಿ ಸಮಾಜದಿಂದ ಕಲಿತುಕೊಳ್ಳುವುದು ಬಹಳ್ಸÀÄ್ಟ ಇದೆ. ಅದನ್ನು ಅರಿತುಕೊಳ್ಳಲು ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಅಂಶಗಳಿಗೂ ಮೌಲ್ಯಗಳನ್ನು ನೀಡಬೇಕು ಮತ್ತು ಆ ವಿಚಾರಗಳ ಬಗ್ಗೆ ವ್ಯವಸ್ಥೆಗಳ ಬಗ್ಗೆ ಗಮನಹರಿಸಬೇಕು. ಆದರೆ ಅದನ್ನು ಕಲಿಕೆ ಎಂದು ಗುರುತಿಸುವಲ್ಲಿ ಹಿಂದುಳಿಯುತ್ತೇವೆ. ಕಲಿಯುವಿಕೆ ಎನ್ನುವುದು ನಿರಂತರವಾದುದು ಎಂದರು.

ಸೇವೆ ತ್ಯಾಗಕ್ಕಾಗಿ ಸಿದ್ಧರಾಗಿ:

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕ್ಸೃÀ್ಣ ಕೆ. ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಗಂಭೀರ ಗಮನವನ್ನು ಕೊಡಬೇಕು. ಪಠ್ಯವನ್ನು ಕಿವಿಯಿಟ್ಟು ಕೇಳುವ ವ್ಯವಧಾನವನ್ನು ಪ್ರವೃತ್ತಗೊಳಿಸಬೇಕು. ಆದರೆ ಪಠ್ಯದ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜ ವಿದ್ಯಾರ್ಥಿಗಳಿಂದ ಕೊಡುಗೆಯನ್ನು ನಿರೀಕ್ಷಿಸುತ್ತಿರುತ್ತದೆ. ಹಾಗಾಗಿ ಸಿಗುವಂತಹ ಎಲ್ಲ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು, ಸೇವೆ ತ್ಯಾಗವನ್ನು ಮಾಡಲು ನಾವು ಸಿದ್ಧರಿರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ತಾವು ಸ್ನಾತಕೋತ್ತರ ವಿಭಾಗಕ್ಕೆ ತಲುಪಿದೆವೆಂದು ದೊಡ್ಡವರಾಗದೆ ಹೆತ್ತವರಿಗೆ ಮಕ್ಕಳಾಗಿಯೇ ಬದುಕಬೇಕು. ಹೆತ್ತವರ ಪ್ರತೀಕ್ಷೆಯನ್ನು ನಿರಾಸೆಗೊಳಿಸದೆ, ಅವರೊಂದಿಗೆ ಆಪ್ತ ಸಂಬAಧವನ್ನು ಬೆಳೆಸಬೇಕು. ಎಂತಹದ್ದೇ ಹುದ್ದೆಯಲ್ಲಿದ್ದರೂ ಹೆತ್ತವರನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಎ.ಕಾಂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ ಎಚ್. ಜಿ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವ್ಸಿÀÄ್ಣ ಗಣಪತಿ ಭಟ್ ಪ್ರಸ್ತಾವಿಸಿ, ಡೀನ್ ಡಾ.ವಿಜಯಸರಸ್ವತಿ ಬಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ವಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ.ಜೀವನ್ ರಾಮ್ ಸುಳ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ:…

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವಪುತ್ತೂರು, ಸೆ. 27: ತರಗತಿಯ…