News & Updates

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ ಕಾಲೇಜಿನಲ್ಲಿ ನವಯುಗಾರಂಭವಾಗಿದೆ. ನಮ್ಮ ರ‍್ಮ,
ಸಂಸ್ಕೃತಿಯ ಬಗ್ಗೆ ಭಾರತೀಯರಾದ ನಾವು ಗೌರವ ತೋರಬೇಕು. ನಮ್ಮೊಳಗಿನ ಸ್ವಾಭಿಮಾನ ಜಾಗೃತವಾಗುವುದು ಅನಿವರ‍್ಯ.
ಎಲ್ಲಾ ಕಡೆಗಳಲ್ಲೂ ರಾಷ್ಟ್ರೀಯತೆಯ ಚಿಂತನೆಯನ್ನು ಹರಿಯಬಿಡಬೇಕು. ಆ ವ್ಯವಸ್ಥೆಯನ್ನು ವಿವೇಕಾನಂದ ಕಾಲೇಜಿನಲ್ಲಿ ನಾವು
ಕಾಣಬಹುದು. ಇದು ಹೆಮ್ಮೆಯು ವಿಚಾರ ಎಂದು ಪುತ್ತೂರು ವಿವೇಕಾನಂದ ವಿದ್ಯಾರ‍್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್
ಕಲ್ಲಡ್ಕ ಹೇಳಿದರು.

ಇವರು ಪುತ್ತೂರು ವಿವೇಕಾನಂದ ಪದವಿಪರ‍್ವ ಕಾಲೇಜಿನಲ್ಲಿ ನಡೆದ ಇಂಗ್ಲೀಷ್ ವ್ಯಾಕರಣ ಮತ್ತು ಸಂವಹನ ಪಠ್ಯಪುಸ್ತಕದ
ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ದೇಶದ ಸತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯ. ಇಂದಿನ ವಾತಾವರಣದ ನಡುವೆ ನಮ್ಮ ಹಿಂದುತ್ವವನ್ನು
ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಇದ್ದರೂ ಇದರ ನಡುವೆ ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯತೆಯ ಚಿಂತನೆಯನ್ನು
ಬೆಳೆಸಿ ಪಸರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕರ‍್ಯಕ್ರಮದ ಗೌರವ ಅತಿಥಿ ವಿವೇಕಾನಂದ ವಿದ್ಯಾರ‍್ಧಕ ಸಂಘದ ಕರ‍್ಯರ‍್ಶಿ ಡಾ. ಕೆ.ಎಮ್. ಕೃಷ್ಣ ಭಟ್ ಮಾತನಾಡಿ,
ಪರಾವಲಂಬನೆಯ ಚಕ್ರವ್ಯೂಹದಲ್ಲಿ ನಾವಿರುವುದು ವಿಷಾದನೀಯ. ಇಂದು ಸ್ವಾವಲಂಬನೆಯ ಹಾದಿಯಲ್ಲಿ ಸಾಗುವ ರೀತಿಯನ್ನು
ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿರುವುದು ಪ್ರಶಂಸನೀಯ. ಈ ಕರ‍್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗು ಅಭಿನಂದನೆ. ಅದೇ ರೀತಿ ಈ
ಉತ್ಸಾಹ ಮುಂದಿನ ದಿನಗಳಲ್ಲಿ ಮುಂದುವರಿಯಲಿ ಎಂದರು.

ಪಠ್ಯಪುಸ್ತಕ ತಯಾರಿಕೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರ ಹಸ್ತಾಕ್ಷರ ಇರುವ ಭಗವದ್ಗೀತೆ
ಪುಸ್ತಕವನ್ನು ನೀಡಿ ಗೌರವಿಸಲಾಯಿತು.

ಕರ‍್ಯಕ್ರಮದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗು ಶಿಕ್ಷಕರು ಭಾಗವಹಿಸಿದರು.

ಇಂದ್ರಪ್ರಸ್ಥ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಚನಾ ಸ್ವಾಗತಿಸಿ, ಮುಖ್ಯ ಸಂಪಾದಕ ಸತೀಶ್ ಕುಮಾರ್ ಪ್ರಾಸ್ತಾವಿಕ
ನುಡಿಗಳನ್ನಾಡಿದರು. ಇಂದ್ರಪ್ರಸ್ಥ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಪ್ರೀತ ವಂದಿಸಿ, ಶ್ರೀರಾಮ ಕಲ್ಲಡ್ಕ ಶಾಲೆಯ ಸಹಾಯಕ
ಪ್ರಾಧ್ಯಾಪಕಿ ರಾಜೇಶ್ವರಿ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ.ಜೀವನ್ ರಾಮ್ ಸುಳ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ:…

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವಪುತ್ತೂರು, ಸೆ. 27: ತರಗತಿಯ…