News & Updates

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ-14-10-2024

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು ಬೇಡಿಕೆ
ಇರುವಂಥದ್ದು. ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಹೋಲಿಸಿದರೆ ಭಾರತೀಯ
ಮನಃಶಾಸ್ತ್ರದಲ್ಲಿ ಬಹಳ ವ್ಯತ್ಯಾಸವಿದೆ. ಮನುಷ್ಯ ಯೋಗ ಮತ್ತು
ಧ್ಯಾನವನ್ನು ಅಭ್ಯಾಸಿಸುವ ಮೂಲಕ ದೈವತ್ವವನ್ನು ಸಾಧಿಸುತ್ತಾನೆ. ಮನಸ್ಸನ್ನು
ಲಗಾಮಿಲ್ಲದ ಕುದುರೆ ಎಂದು ಕೃಷ್ಣ ಭಗವತ್ ಗೀತೆಯಲ್ಲಿ ಹೇಳಿದ್ದಾನೆ.
ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಹಾಗೂ ಧ್ಯಾನ ಅತ್ಯಗತ್ಯ.
ಮನುಷ್ಯನ ಮೆದುಳಿನ ಸ್ಥಿತಿಗತಿಯು ಆತ ಸೇವಿಸುವ ಆಹಾರದ ಮೇಲೆ
ಅವಲಂಬಿತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ
ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಮತ್ತು ಐ.ಕ್ಯೂ.ಎ.ಸಿ ಹಾಗೂ ವಿಜ್ಞಾನ ಘಟಕದ ಸಹಯೋಗದಲ್ಲಿ
ಮನೋವಿಜ್ಞಾನ ವಿಭಾಗದ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ
ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ನಮ್ಮ ದೇಹ ಬೆಳೆದಂತೆ, ಬುದ್ಧಿ, ಮನಸ್ಸು
ಹಾಗೂ ಚಿತ್ತ ಬೆಳವಣಿಗೆ ಹೊಂದುತ್ತ ಹೋಗುತ್ತದೆ. ವಿದ್ಯಾರ್ಥಿಗಳು
ಮನಸ್ಸನ್ನು ತಿದ್ದಿಕೊಂಡು ಜೀವನೋತ್ಸಾಹವನ್ನು ಹೆಚ್ಚಿಸಿಕೊಂಡು ಬದುಕಬೇಕು.
ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿರಬೇಕಾದರೆ ಅದನ್ನು ಸರಿಯಾಗಿ
ನಿರ್ವಹಿಸುವ ಕ್ರಮವನ್ನು ನಾವು ತಿಳಿದುಕೊಂಡಿರಬೇಕು. ನಮ್ಮ ಆರೋಗ್ಯವು
ನಮ್ಮ ಮಾನಸಿಕತೆಯ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪೆÇ್ರ.ವಿಷ್ಣುಗಣಪತಿ ಭಟ್, ಕಾಲೇಜಿನ
ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಮನೋವಿಜ್ಞಾನ
ವಿಭಾಗದ ಉಪನ್ಯಾಸಕಿ ಅನುμÁ, ಐಕ್ಯೂಎಸಿ ಘಟಕದ ಸಂಯೋಜಕ ಹಾಗೂ ವಿಜ್ಞಾನ
ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿನಿ ವಾಣಿಶ್ರೀ ಸ್ವಾಗತಿಸಿ, ದ್ವಿತೀಯ
ವರ್ಷದ ವಿದ್ಯಾರ್ಥಿನಿ ಬೆಟ್ಟಿ ಜಾನ್ ವಂದಿಸಿ, ದ್ವಿತೀಯ ವರ್ಷದ ತೇಜಸ್ವಿನಿ ಹಾಗೂ ಜೀವಿತಾ
ಕಾರ್ಯಕ್ರಮ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ.ಜೀವನ್ ರಾಮ್ ಸುಳ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ:…

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವಪುತ್ತೂರು, ಸೆ. 27: ತರಗತಿಯ…