ಎಲ್ಲರೂ ಒಗ್ಗಟ್ಟಾಗಿ ಆಚರಿಸುವ ಹಬ್ಬ ಓಣಂ:
ಡಾ. ಶ್ರೀಧರ್ ನಾÊಕ್

ಪುತ್ತೂರು: “ಓಣಂ ಮುಖ್ಯವಾಗಿ ಕೃಷಿಕರ ಹಬ್ಬವಾಗಿದೆ.
ಇತಿಹಾಸದಲ್ಲಿ ಈ ಹಬ್ಬಕ್ಕೆ ಪ್ರಮುಖ ಸ್ಥಾನವಿದೆ. ಭಕ್ತಿ,
ದಯೆ ಹಾಗೂ ಶಕ್ತಿಶಾಲಿಯಾಗಿದ್ದ ರಾಜ ಮಹಾಬಲಿಯ
ಸ್ವಾಗತಕ್ಕಾಗಿ ಆಚರಿಸಲಾಗುತ್ತಿದೆ. ಹತ್ತು ದಿನಗಳ ಕಾಲ
ಅಚರಿಸುವ ಹಬ್ಬದಲ್ಲಿ ಪೂಕ್ಕಳಂ, ಓಣಂ ಸದ್ಯ,
ಸಾಂಪ್ರದಾಯಿಕ ನೃತ್ಯ ಸೇರಿದಂತೆ ಅನೇಕ ಸಾಂಸ್ಕçತಿಕ
ವಿಶೇಷತೆಗಳಿವೆ. ಧಾರ್ಮಿಕ ಚೌಕಟ್ಟನ್ನು ಪ್ರಪಂಚಕ್ಕೆ
ಪರಿಚಯಿಸಿದ್ದು ಭಾರತ. ಕೇರಳದ ಶ್ರೀಮಂತ
ಸಾAಸ್ಕೃತಿಕತೆಯನ್ನು ಪ್ರತಿಬಿಂಬಿಸುವುದು
ಮಾತ್ರವಲ್ಲದೇ ಇಂದು ಎಲ್ಲಾ ವರ್ಗದ ಜನರನ್ನು
ಒಟ್ಟುಗೂಡಿಸುವ ಸಂಭ್ರಮದ ಹಬ್ಬವಾಗಿದೆ” ಎಂದು
ವಿವೇಕಾನAದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.
ಶ್ರೀಧರ್ ನಾÊಕ್ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ
ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ
ಓಣಂ ಆಚರಣೆಯನ್ನು ದೀಪ ಬೆಳಗಿ ಉದ್ಘಾಟಿಸಿ
ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ
ಮಾತನಾಡಿ, “ಪಾರಂಪರಿಕ ಪ್ರಜ್ಞೆ ಮತ್ತು ಸಾಂಸ್ಕçತಿಕ
ಪ್ರಜ್ಞೆ ಅತೀ ಮುಖ್ಯ. ನಮ್ಮ ಪರಂಪರೆ, ಆಚರಣೆ
ಹಾಗೂ ಸಂಸ್ಕೃತಿಯ ಕುರಿತು ತಿಳುವಳಿಕೆ ಪಡೆದು
ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸುವುದು
ನಮ್ಮೆಲರ ಜವಾಬ್ದಾರಿ. ಓಣಂ ಪೂಕ್ಕಳಂ ರೀತಿಯಲ್ಲಿ ಎಲ್ಲರ
ಬದುಕು ಬಣ್ಣದಿಂದ ಕೂಡಿರಲಿ” ಎಂದು ಹಾರೈಸಿದರು.
ಅಂತಿಮ ಎಂ.ಕಾA. ವಿದ್ಯಾರ್ಥಿ ನವೀನ ಕೃಷ್ಣ ನಿರೂಪಿಸಿ,
ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ
ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು,
ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು
ಉಪಸ್ಥಿತರಿದ್ದರು. ಈ ಸಂದರ್ಭ ಎಂ.ಕಾA. ವಿದ್ಯಾರ್ಥಿನಿಯರು
ಕೇರಳದÀ ಸಾಂಪ್ರಾದಾಯಿಕ ಓಣಂ ನೃತ್ಯ
ಪ್ರದರ್ಶಿಸಿದರು.