know us better

Research CELL

ವಿವೇಕಾನಂದ ಸಂಶೋಧನ ಕೇಂದ್ರ 

ಉನ್ನತ ಶಿಕ್ಷಣದ ಸಂದರ್ಭದಲ್ಲಿ ‘ಸಂಶೋಧನೆ’ ಅಧ್ಯಯನ ಭಾಗವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಸಂಸ್ಥೆಯೂ ಸಂಶೋಧನಾ ಕೇಂದ್ರವಾಗಿ ರೂಪುಗೊಳ್ಳುತ್ತದೆ. ಸ್ವಾಯತ್ತ ಸಂಸ್ಥೆಯಾಗಿರುವ ಈ ಹೊತ್ತಿನಲ್ಲಿ ಸಂಸ್ಥೆ ಸಂಶೋಧನಾ ಕೇಂದ್ರವನ್ನು ಹೊಂದುವುದು ಅಪೇಕ್ಷಣೀಯ ಹಾಗೂ ಅನಿವಾರ್ಯ. ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಸಂಶೋಧನಾತ್ಮಕ ಪ್ರವೃತ್ತಿಯನ್ನು ಬೆಳೆಸುವುದು ಅಗತ್ಯವಾಗಿ ಆಗಬೇಕಾದ ಕೆಲಸವಾಗಿದೆ.ವೈಜ್ಞಾನಿಕವಾಗಿ ಚಿಂತನಪರವಾಗಿ ಯೋಚಿಸುವ, ಯೋಚಿಸಿದ್ದನ್ನು ಕ್ರಮವತ್ತಾಗಿ ಬರೆಯುವ ಪ್ರಕ್ರಿಯೆ ಸಂಶೋಧನ ಲೇಖನಗಳಿಗೆ ಅಗತ್ಯವಿದೆ. ಈ ದೃಷ್ಟಿಯಿಂದ ವಿವೇಕಾನಂದ ಸಂಶೋಧನ ಕೇಂದ್ರ ಕಾಲೇಜಿನ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಜನ್ಮತಳೆದಿದೆ.

ಸಂಶೋಧನ ಲೇಖನಗಳ ಬರವಣಿಗೆ, ಡಾಕ್ಟರೇಟ್ ಪದವಿ ಹಾಗೂ ಶೈಕ್ಷಣಿಕ ಪದೋನ್ನತಯ ನಡುವೆ ನೇರ ಸಂಬಂಧವಿರುವುದರಿಂದ ಈ ಕುರಿತಾಗಿ ಸಮಾಜಕ್ಕೆ ಮಾಹಿತಿ ನೀಡುವ ಅನಿವಾರ್ಯತೆಯಿದೆ. ಹೀಗಾಗಿ ವಿವೇಕಾನಂದ ಸಂಶೋಧನ ಕೇಂದ್ರವು, ಸಂಶೋಧನೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಮಾರ್ಗದರ್ಶನವನ್ನೂ ಹಾಗೆಯೇ ಪ್ರೋತ್ಸಾಹವನ್ನೂ ನೀಡುವ ನಿಟ್ಟಿನಲ್ಲಿ ತನ್ನ ಕಾರ್ಯವನ್ನು ಮಾಡುತ್ತಿದೆ.

ಚಟುವಟಿಕೆಗಳು

  • ‘ಸಮತ್ವ’ ಸಂಶೋಧನಾ ಪತ್ರಿಕೆಯ ಆರಂಭ ಹಾಗೂ ಪ್ರಕಟನೆ
  • ಸಂಶೋಧನಾ ವಿಧಿ-ವಿಧಾನಗಳ ಕುರಿತಾಗಿ ಮಾಹಿತಿ ನೀಡುವುದು ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುವುದು.
  • ವಿದ್ಯಾರ್ಥಿಗಳಿಗೆ ಕಿರು ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸುವುದರ ಕುರಿತಾಗಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು.
  • ವಿದ್ಯಾರ್ಥಿಗಳು ಸಮಾಜಮುಖಿ ಅಧ್ಯಯನದಲ್ಲಿ ತೊಡಗುವಂತೆ ಮಾಡುವುದು
  • ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಮುನ್ನಡೆಯಲು ಬೇಕಾದ ಮಾರ್ಗದರ್ಶನ ನೀಡುವುದು.
  • ಮೌಲಿಕ ಸಂಶೋಧನಾ ಕೃತಿಗಳ ಪ್ರಕಟನೆಗೆ ಮಾರ್ಗದರ್ಶನ ಮಾಡುವುದು.
  • ನಾಡು-ನುಡಿ- ಸಂಸ್ಕೃತಿಯ ಬಗ್ಗೆ ಸಂಶೋಧನೇ ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಹ ಮಾಡುವುದು
  • ಸಂಶೋಧನಾ ಕೇಂದ್ರವನ್ನು ವಿಶ್ವವಿದ್ಯಾನಿಯಕ್ಕೆ ನೋಂದಾಯಿಸಿ ಮಾನ್ಯತೆ ಪಡೆಯುವುದು. ತನ್ಮೂಲಕ ಮಾನ್ಯ ಕುಲಪತಿಗಳ ಮಾರ್ಗದರ್ಶನ, ಸಲಹೆ ಹಾಗೂ ಸಹಾಯಗಳನ್ನು ಪಡೆದುಕೊಳ್ಳುವುದು.
  • ವಿಚಾರಗೋಷ್ಠಿ ಉಪನ್ಯಾಸಗಳನ್ನು ಏರ್ಪಡಿಸುವುದು.

ಈಗಾಗಲೇ ವಿವೇಕಾನಂದ ಸಂಶೋಧನಾ ಕೇಂದ್ರವು ಕರ‍್ಯರಂಭಗೊಂಡಿದ್ದು ಆಯ್ಕ ಸಂಶೋಧನಾಸಕ್ತ ಅಧ್ಯಾಪತರುಗಳಿಗೆ ಮೈನರ್ ರೀಸರ್ಚ್ ಪ್ರೊಜೆಕ್ಟನ್ನು ನೀಡಲಾಗಿದ್ದು, ಅಧ್ಯಾಪಕರುಗಳು ಮಾರ್ಗದರ್ಶನ ನೀಡುತ್ತಿದ್ದಾರೆ. ಕೇಂದ್ರದ ವತಿಯಿಂದ ಸಂಶೋಧನೆಯ ಕುರಿತು ಕರ‍್ಯಾಗಾರಗಳು ನಡೆದಿದ್ದು ಪ್ರಸ್ತುತ ಡಾ.ವಿಜಯಸರಸ್ವತಿ ಬಿ. ಇವರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ.