News & Updates

ಓಣಂ ದೇವರ ನಾಡಿನ ಹಬ್ಬವಾಗಿದೆ -ಡಾ. ಶ್ರೀಧರ ನಾಯಕ್;

ವಿವೇಕಾನಂದ ಕಾಲೇಜಿನಲ್ಲಿ ಓಣಂ ಆಚರಣೆ
ಪುತ್ತೂರು: ಸಮೃದ್ಧ, ಶ್ರೀಮಂತ, ಸಾಂಸ್ಕೃತಿಕ
ವೈಭವವನ್ನು ಹೊಂದಿರುವ ರಾಜ್ಯ ಕೇರಳ. ಓಣಂ ಕೇರಳದ
ಒಂದು ಕೃಷಿ ಪ್ರಧಾನವಾದ ಹಬ್ಬವಾಗಿದೆ. ಕೃಷಿಯಲ್ಲಿ ಫಸಲು
ಬಂದಾಗ ಅದನ್ನು ಮನೆಗೆ ತಂದು ಆಚರಿಸುವ ಹಬ್ಬ ಇದಾಗಿದೆ. ಈ
ಪರ್ವವನ್ನು ಬಡವ ಬಲ್ಲಿದನೆಂಬ ತಾರತಮ್ಯವಿಲ್ಲದೆ
ವಿಜೃಂಭಣೆಯಿAದ ಸಂಭ್ರಮಿಸುತ್ತಾರೆ ಎಂದು ವಿವೇಕಾನಂದ
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಹೇಳಿದರು.
ಇವರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಇಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ,
ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ
ಕೇಂದ್ರ,ಮಾನವಶಾಸ್ತ್ರ ಸಂಘ, ಐಕ್ಯೂಎಸಿ ಹಾಗೂ ಮತ್ತಿತರ
ಸಂಘ-ಸAಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆದ ಓಣಂ ಉತ್ಸವ
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ ಪೂಕಳಂ ಸ್ಪರ್ಧೆಯಲ್ಲಿ
ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದ
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ನಡೆಯಿತು.
ವೇದಿಕೆಯಲ್ಲಿ ಉಪಪ್ರಾಂಶುಪಾಲ ಕೃಷ್ಣ ಗಣರಾಜ್ ಭಟ್ ಎಸ್,
ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ
ಡಾ.ವಿದ್ಯಾ. ಎಸ್ ನಿರ್ವಹಿಸಿ ತೃತೀಯ ಕಲಾ ವಿಭಾಗದ ವಿದ್ಯಾರ್ಥಿ ಧನ್ಯಶ್ರೀ
ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…